ಸಿಖ್ಖರೊಂದಿಗೆ ಸರ್ಕಾರ, ಪ್ರಧಾನಿ ಮೋದಿ ಅವರ ವಿಶೇಷ ಬಾಂಧವ್ಯ ಕುರಿತ ಕಿರುಪುಸ್ತಕ ಬಿಡುಗಡೆ

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ 'ಸಿಖ್ ಜನರೊಂದಿಗೆ ಪಿಎಂ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಸಂಬಂಧ' ಪುಸ್ತಕವನ್ನು ಬಿಡುಗಡೆಗೊಳಿಸಿದರು. 
ಜಾವಡೇಕರ್, ಪುರಿ
ಜಾವಡೇಕರ್, ಪುರಿ

ನವದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ 'ಸಿಖ್ ಜನರೊಂದಿಗೆ ಪಿಎಂ ಮೋದಿ ಮತ್ತು ಅವರ ಸರ್ಕಾರದ ವಿಶೇಷ ಸಂಬಂಧ' ಪುಸ್ತಕವನ್ನು ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು. ಹಿಂದಿ, ಪಂಜಾಬಿ ಮತ್ತು ಆಂಗ್ಲ ಭಾಷೆಯಲ್ಲಿ ಈ ಪುಸ್ತಕಗಳು ಬಿಡುಗಡೆಗೊಂಡವು.

ಈ ವೇಳೆ ಮಾತನಾಡಿದ ಹರದೀಪ್ ಸಿಂಗ್ ಪುರಿ, ಗುರುನಾನಕ್ ಜಯಂತಿಯ 550ನೇ ಜನ್ಮ ದಿನಾಚರಣೆಗಾಗಿ ಸರ್ಕಾರ ಕಳೆದ ಒಂದು ವರ್ಷದಿಂದ ನಡೆಸಿದ ತಯಾರಿಗಳ ಬಗ್ಗೆ ವಿವರಿಸಿದರು.

ಮುಂದಿನ ದಿನಗಳಲ್ಲಿ ಬ್ರಿಟನ್ ಮತ್ತು ಕೆನಡಾದ ವಿಶ್ವವಿದ್ಯಾನಿಲಯದಲ್ಲಿ ಗುರುನಾನಕ್ ದೇವ್ ಅವರ ಪೀಠ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದರು. ಕರ್ತಾರ್ ಪುರ ಕಾರಿಡಾರ್ ನಿರ್ಮಾಣ ಕಾರ್ಯದಲ್ಲಿ ಪ್ರಧಾನ ಮಂತ್ರಿ ವೈಯುಕ್ತಿಕವಾಗಿ ತೋರಿದ  ಆಸಕ್ತಿಯನ್ನು ಪುರಿ ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com