ಸುಶಾಂತ್ ರಜ್ಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು: ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ 

ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆಯ ಭಾಗವಾಗಿದ್ದ ಫೋರೆನ್ಸಿಕ್ ಮೆಡಿಕಲ್ ಬೋರ್ಡ್, ಬಾಲಿವುಡ್ ನಟನ ಸಾವು ಕೊಲೆಯಿಂದಾಗಿರುವ ಸಾಧ್ಯತೆ ಇಲ್ಲ ಎಂದು ಹೇಳಿದೆ. 
ಸುಶಾಂತ್ ರಜ್ಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು: ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ
ಸುಶಾಂತ್ ರಜ್ಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು: ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ

ನವದೆಹಲಿ: ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆಯ ಭಾಗವಾಗಿದ್ದ ಫೋರೆನ್ಸಿಕ್ ಮೆಡಿಕಲ್ ಬೋರ್ಡ್, ಬಾಲಿವುಡ್ ನಟನ ಸಾವು ಕೊಲೆಯಿಂದಾಗಿರುವ ಸಾಧ್ಯತೆ ಇಲ್ಲ ಎಂದು ಹೇಳಿದೆ. 

ನಾವು ನಮ್ಮ ವರದಿಯನ್ನು ಅಂತಿಮಗೊಳಿಸಿದ್ದೇವೆ. ಈ ಪ್ರಕರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದೇ ಕಾರಣ ಎಂದು ಏಮ್ಸ್ ನ ಫೋರೆನ್ಸಿಕ್ ಮುಖ್ಯಸ್ಥ ಸುಧೀರ್ ಗುಪ್ತಾ ಹೇಳಿದ್ದಾರೆ. 

ಸುಶಾಂತ್ ಸಿಂಗ್ ಪಾರ್ಥಿವ ಶರೀರದ ಮೇಲೆ ನೇಣು ಬಿಗಿದುಕೊಂಡಾಗ ಮೂಡುವ ಕಲೆಗಳ ಹೊರತಾಗಿ ಬೇರೆ ಯಾವುದೇ ಗುರುತುಗಳಿಲ್ಲ ಎಂದು 7 ವೈದ್ಯರನ್ನೊಳಗೊಂಡ ಫೊರೆನ್ಸಿಕ್ ಮೆಡಿಕಲ್ ಬೋರ್ಡ್ ನ ಮುಖ್ಯಸ್ಥರೂ ಆಗಿರುವ ಸುಧೀರ್ ತಿಳಿಸಿದ್ದಾರೆ.

ತನ್ನ ವರದಿಯಲ್ಲಿರುವ ಅಂಶಗಳನ್ನು ಸಿಬಿಐ ಜೊತೆಗೆ  ವೈದ್ಯರ ತಂಡ ಚರ್ಚಿಸಿದೆ. ಬಾಂಬೆಯ ಎಫ್ಎಸ್ಎಲ್ ಹಾಗೂ ಏಮ್ಸ್ ಟಾಕ್ಸಿಕೋಲಜಿ ಲ್ಯಾಬ್ ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಸೆಡೆಟೀವ್ ಅಂಶಗಳಿರುವುದು ಪತ್ತೆಯಾಗಿಲ್ಲ ಎಂದು ಹೇಳಿದ್ದು, ಪ್ರಕರಣದ ವಿಚಾರಣಾಧೀನವಾಗಿರುವುದರಿಮ್ದ ಹೆಚ್ಚಿನ ಮಾಹಿತಿ, ವಿವರಗಳನ್ನು ನೀಡಲು ವೈದ್ಯ ಮಂಡಳಿ ನಿರಾಕರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com