ಬಿಹಾರ ಚುನಾವಣೆ: ಎನ್ ಡಿಎ ತೊರೆದು ಏಕಾಂಗಿ ಸ್ಪರ್ಧೆಗೆ ಎಲ್ ಜೆಪಿ ನಿರ್ಧಾರ

ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿರುವ ಎನ್ ಡಿಎ ಗೆ ಬಿಹಾರ ವಿಧಾನಸಭಾ ಚುನಾವಣೆ ಮತ್ತೊಂದು ಅಘಾತ ನೀಡಿದೆ.
ಎಲ್ ಜೆಪಿ ಪಕ್ಷದ ಸಂಸದೀಯ ಮಂಡಳಿ ಸಭೆ ದೃಶ್ಯ
ಎಲ್ ಜೆಪಿ ಪಕ್ಷದ ಸಂಸದೀಯ ಮಂಡಳಿ ಸಭೆ ದೃಶ್ಯ

ನವದೆಹಲಿ: ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿರುವ ಎನ್ ಡಿಎ ಗೆ ಬಿಹಾರ ವಿಧಾನಸಭಾ ಚುನಾವಣೆ ಮತ್ತೊಂದು ಅಘಾತ ನೀಡಿದೆ.

ಸ್ಥಾನ ಹಂಚಿಕೆಯ ವಿಷಯವಾಗಿ ಅಸಮಾಧಾನ ಹೊಂದಿದ್ದ ಎಲ್ ಜೆಪಿ ಹೆಚ್ಚಿನ ಸ್ಥಾನದಲ್ಲಿ ಸ್ಪರ್ಧಿಸುವ ಬೇಡಿಕೆ ಮುಂದಿಟ್ಟಿತ್ತು. ಕಳೆದ ಬಾರಿ ಮಹಾಘಟಬಂಧನ್ ನಲ್ಲಿ ಗುರುತಿಸಿಕೊಂಡಿದ್ದ ಜೆಡಿಯು ಈ ಬಾರಿ ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವುದು ಎಲ್ ಜೆಪಿ-ಬಿಜೆಪಿ-ಜೆಡಿಯು ನಡುವಿನ ಸ್ಥಾನ ಹಂಚಿಕೆ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಎನ್ ಡಿಎ ಮೈತ್ರಿಕೂಟದಿಂದ ಎಲ್ ಜೆಪಿ ಹೊರನಡೆಯುತ್ತದೆ ಎಂಬ ವದಂತಿಗಳ ನಡುವೆಯೇ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗಿದೆ. 

ಪಕ್ಷದ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಎಲ್ ಜೆಪಿ ಎನ್ ಡಿಎ ಜೊತೆ ಮೈತ್ರಿಯನ್ನು ತೊರೆದು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

143 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ ಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಜೊತೆ ಮಾತುಕತೆ ನಡೆದಾಗ ಎಲ್ ಜೆಪಿ 143 ಸ್ಥಾನಗಳಿಗೇ ಬೇಡಿಕೆ ಮುಂದಿಟ್ಟಿತ್ತು. ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಎಲ್ ಜೆಪಿ ಶೀಘ್ರವೇ ತನ್ನ ಮುಂದಿನ ನಡೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಏಕಾಂಗಿಯಾಗಿ ಸ್ಪರ್ಧಿಸುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾಲಿದ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com