ಭಾರತಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮಾಡಿದ್ದನ್ನು ಮೋದಿ ಸರ್ಕಾರ ಈಗ ಮಾಡುತ್ತಿದೆ: ರಾಹುಲ್ ಗಾಂಧಿ

ಮೂರು ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಮೂರು ದಿನಗಳ ಖೇತಿ ಬಚಾವೊ ಯಾತ್ರೆಯ ಎರಡನೇ ದಿನವಾದ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋಲಿಕೆ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಚಂಡೀಘಡ: ಮೂರು ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಮೂರು ದಿನಗಳ ಖೇತಿ ಬಚಾವೊ ಯಾತ್ರೆಯ ಎರಡನೇ ದಿನವಾದ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋಲಿಕೆ ಮಾಡಿದ್ದಾರೆ.

ಬ್ರಿಟಿಷ್ ಸಂಸ್ಥೆಯ ರೀತಿಯಲ್ಲಿ ರೈತರ ಬೆನ್ನೆಲುಬನ್ನು ಮುರಿಯುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯಶಸ್ವಿಯಾದರೆ, ಇಡೀ ರಾಷ್ಟ್ರವು ಅಂಬಾನಿ ಮತ್ತು ಅದಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಗುಲಾಮರಾಗುತ್ತಿದ್ದಾರೆ ಎಂದರು.

ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶದಲ್ಲಿ ಮಾಡಿದ್ದ ಕೆಲಸವನ್ನು ಈಗ ಮೋದಿ ಸರ್ಕಾರ ಮಾಡುತ್ತಿದ್ದಾರೆ.ಕಾರ್ಪೋರೇಟ್ ಆಡಳಿತದಲ್ಲಿಈಗ ಜನರು ಏನು 10 ರೂ.ಗೆಕೊಂಡುಕೊಳ್ಳುತ್ತಿದ್ದಾರೋ ಅದಕ್ಕೆ 50 ರೂ ಭರಿಸಬೇಕಾಗುತ್ತದೆ. ಹಣ ರೈತರು ಅಥವಾ ಕಾರ್ಮಿಕರಿಗೆ ಹೋಗಲ್ಲ, ಆದರೆ, ಕಾರ್ಪೋರೇಟರ್ ಮನೆಗಳ ಜೇಬುಗಳಿಗೆ ಹೋಗಲಿದೆ ಎಂದರು.

ದೇಶದ ಕೃಷಿ ವಲಯದ ಗೋಡೆ ಆಗಿರುವ ಮಂಡಿ ಹಾಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಅಂಬಾನಿ, ಅದಾನಿ ಕಾರ್ಮಿಕರನ್ನು ಬಳಸಿಕೊಳ್ಳಲ್ಲ ಆದರೆ, ಯಂತ್ರಗಳ ಮೂಲಕ ಕೃಷಿ ಕ್ಷೇತ್ರದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.ಇದರಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಮಸೂದೆಗಳ ವಿರುದ್ಧದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಪ್ರತಿಯೊಬ್ಬ ರೈತನು ಈ ಮಸೂದೆಗಳ ವಿರುದ್ಧ ಮತ್ತು ನಿಮ್ಮ ಪಕ್ಷದ ವಿರುದ್ಧ ಬೀದಿಗಿಳಿಯುತ್ತಾರೆ.ಕಾಂಗ್ರೆಸ್ ಎಲ್ಲಾ ರೈತರೊಂದಿಗೆ ನಿಂತಿದೆ ಮತ್ತು ಯಾವಾಗಲೂ ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೃಷಿ ಕ್ಷೇತ್ರವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ. ಉದ್ಯೋಗಗಳನ್ನು ಸೃಷ್ಟಿಸುವುದು ಅಂಬಾನಿ ಮತ್ತು ಅದಾನಿಯಲ್ಲ,  ಸಣ್ಣ ಉದ್ಯಮಗಳು ಮತ್ತು ಎಂಎಸ್‌ಎಂಇಗಳು, ಮೋದಿ ಅವರ ನೋಟ್ ಅಮಾನ್ಯೀಕರಣ, ಜಿಎಸ್‌ಟಿ ಮುಂತಾದ ಕೆಟ್ಟ ಪರಿಕಲ್ಪನೆಗಳಿಂದ ಅವರು ಕೂಡಾ ಹಾಳಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್-19 ಬಿಕ್ಕಟ್ಟನ್ನು ಸಹ ಬಂಡವಾಳಶಾಹಿ ಸ್ನೇಹಿತರಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ಬಳಸಿಕೊಂಡಿದ್ದಾರೆ. ಅವರ ಸಾಲಗಳು, ತೆರಿಗೆಗಳನ್ನು ಮನ್ನಾ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ನೂತನ ಕಾಯ್ದೆಗಳ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com