ಆಯುರ್ವೇದ ಆಧಾರಿತ ಕೋವಿಡ್-19 ಚಿಕಿತ್ಸೆಯ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ
ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದರ ಮಧ್ಯೆ ಕಡಿಮೆ ಮತ್ತು ರೋಗಲಕ್ಷಣರಹಿತ ಕೋವಿಡ್-19 ವೈರಸ್ ಸೋಂಕಿತರಿಗೆ ಗುಡುಚಿ, ಅಶ್ವಗಂಧ ಮತ್ತು ಆಯುಷ್ -64ನಂತಹ ಆಯುರ್ವೇದ ವಸ್ತುಗಳನ್ನು ಬಳಸಬಹುದು ಎಂದು ಕೇಂದ್ರ ಆಯುಷ್ ಇಲಾಖೆ ಜನರಿಗೆ ಶಿಫಾರಸು ಮಾಡಿದೆ.
Published: 07th October 2020 12:24 PM | Last Updated: 07th October 2020 12:24 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವುದರ ಮಧ್ಯೆ ಕಡಿಮೆ ಮತ್ತು ರೋಗಲಕ್ಷಣರಹಿತ ಕೋವಿಡ್-19 ವೈರಸ್ ಸೋಂಕಿತರಿಗೆ ಗುಡುಚಿ, ಅಶ್ವಗಂಧ ಮತ್ತು ಆಯುಷ್ -64ನಂತಹ ಆಯುರ್ವೇದ ವಸ್ತುಗಳನ್ನು ಬಳಸಬಹುದು ಎಂದು ಕೇಂದ್ರ ಆಯುಷ್ ಇಲಾಖೆ ಜನರಿಗೆ ಶಿಫಾರಸು ಮಾಡಿದೆ.
ಆಯುರ್ವೇದ, ಯೋಗಕ್ಕೆ ಸಂಬಂಧಿಸಿದಂತೆ ಕೋವಿಡ್-19 ರಾಷ್ಟ್ರೀಯ ಪ್ರಯೋಗ ನಿರ್ವಹಣೆ ಶಿಷ್ಟಾಚಾರ ಮುಂದುವರಿದಿರುವುದರ ಮಧ್ಯೆ, ಆರೋಗ್ಯ ಸಚಿವ ಹರ್ಷ ವರ್ಧನ್ ಮತ್ತು ಆಯುಷ್ ಸಚಿವ ಶ್ರೀಪಾದ್ ನಾಯಕ್ ಹೊರಡಿಸಿರುವ ನಿರ್ದೇಶನದಂತೆ ಸೋಂಕಿತ ವ್ಯಕ್ತಿಗಳಾಗಿದ್ದು ಅಧಿಕ ಅಪಾಯ ಹೊಂದಿರುವ ಮತ್ತು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಬಂದಿರುವವರು ಬಳಸಬಹುದು ಎಂದು ಹೇಳಿದ್ದಾರೆ.
ಕೋವಿಡೋತ್ತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ರೋಗಲಕ್ಷಣರಹಿತ ಸೋಂಕಿತರು ಮತ್ತು ಕಡಿಮೆ ತೊಂದರೆ ಹೊಂದಿರುವ ಕೊರೋನಾ ಸೋಂಕಿತರು ಆಯುರ್ವೇದ ಔಷಧಿಗಳನ್ನು ಬಳಸಬಹುದೆಂದು ಕೇಂದ್ರ ಸಚಿವರುಗಳು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ. ಕೊರೋನಾ ಸೋಂಕಿನಿಂದ ತೀವ್ರ ಆರೋಗ್ಯ ಸಮಸ್ಯೆ ಮತ್ತು ಸಾಧಾರಣ ಸಮಸ್ಯೆ ಹೊಂದಿರುವವರಿಗೆ ಈ ಆಯುರ್ವೇದ ಔಷಧಿಗಳನ್ನು ಶಿಫಾರಸು ಮಾಡಿಲ್ಲ.