24 ವಿವಿಗಳು ನಕಲಿ- ಯುಜಿಸಿ ಘೋಷಣೆ; ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 

ವಿಶ್ವವಿದ್ಯಾಲಯ ಧನಸಹಾಯ ಆಯೋಗ ದೇಶಾದ್ಯಂತ 24 ವಿವಿಗಳನ್ನು ನಕಲಿ ಎಂದು ಘೋಷಿಸಿದೆ.
24 ವಿವಿಗಳು ನಕಲಿ- ಯುಜಿಸಿ ಘೋಷಣೆ; ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು
24 ವಿವಿಗಳು ನಕಲಿ- ಯುಜಿಸಿ ಘೋಷಣೆ; ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ ದೇಶಾದ್ಯಂತ 24 ವಿವಿಗಳನ್ನು ನಕಲಿ ಎಂದು ಘೋಷಿಸಿದೆ. 

ಈ ನಕಲಿ ವಿವಿಗಳನ್ನು ಅಮಾನ್ಯವೆಂದು ಘೋಷಿಸಿದ್ದು, ಈ ಪೈಕಿ ಅತಿ ಹೆಚ್ಚು ಉತ್ತರ ಪ್ರದೇಶದ್ದಾಗಿದ್ದು, ನಂತರದ ಸ್ಥಾನದಲ್ಲಿ ದೆಹಲಿ ಇದೆ.

ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಈ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪದವಿಯನ್ನೂ ನೀಡುವ ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 8 ವಿವಿಗಳು, ದೆಹಲಿಯಲ್ಲಿ 7 ವಿವಿಗಳು ಹಾಗೂ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ತಲಾ 2 ವಿವಿಗಳು ನಕಲಿಗಳೆಂದು ಯುಜಿಸಿ ಘೋಷಿಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಾಂಡಿಚೆರಿಗಳಲ್ಲಿ ತಲಾ ಒಂದು ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com