ಆರೆ ಮಿಲ್ಕ್ ಕಾಲೋನಿಯಿಂದ ಮೆಟ್ರೋ ಕಾರ್ ಶೆಡ್ ಕಾಂಜುರ್ಮಾರ್ಗ್‌ ಗೆ ಸ್ಥಳಾಂತರಿಸಲು 'ಮಹಾ' ಸರ್ಕಾರದ ನಿರ್ಧಾರ

ಆರೆ ಮಿಲ್ಕ್ ಕಾಲೋನಿಯಲ್ಲಿರುವ ಮೆಟ್ರೋ ಕಾರ್ ಶೆಡ್ ನ್ನು ಕಾಂಜುರ್ಮಾರ್ಗ್‌ಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಆರೆ ಮಿಲ್ಕ್ ಕಾಲೋನಿಯಿಂದ ಮೆಟ್ರೋ ಕಾರ್ ಶೆಡ್ ಕಾಂಜುರ್ಮಾರ್ಗ್‌ ಗೆ ಸ್ಥಳಾಂತರಿಸಲು 'ಮಹಾ' ಸರ್ಕಾರದ ನಿರ್ಧಾರ
ಆರೆ ಮಿಲ್ಕ್ ಕಾಲೋನಿಯಿಂದ ಮೆಟ್ರೋ ಕಾರ್ ಶೆಡ್ ಕಾಂಜುರ್ಮಾರ್ಗ್‌ ಗೆ ಸ್ಥಳಾಂತರಿಸಲು 'ಮಹಾ' ಸರ್ಕಾರದ ನಿರ್ಧಾರ

ಮುಂಬೈ: ಆರೆ ಮಿಲ್ಕ್ ಕಾಲೋನಿಯಲ್ಲಿರುವ ಮೆಟ್ರೋ ಕಾರ್ ಶೆಡ್ ನ್ನು ಕಾಂಜುರ್ಮಾರ್ಗ್‌ಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. 

ವೆಬ್ ಕಾಸ್ಟ್ ನಲ್ಲಿ ಉದ್ಧವ್ ಠಾಕ್ರೆ ಸ್ವತಃ ಈ ಘೋಷಣೆ ಮಾಡಿದ್ದು ಯೋಜನೆಯ ಪ್ರದೇಶವನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹೊಸ ಪ್ರದೇಶದ ಭೂಮಿಗಾಗಿ ಯಾವುದೇ ರೀತಿಯಲ್ಲಿ ಹೆಚ್ಚಿನ ಖರ್ಚು ಮಾಡಲಾಗುತ್ತಿಲ್ಲ ಎಂದು ಠಾಕ್ರೆ ತಿಳಿಸಿದ್ದಾರೆ. ಈಗಾಗಲೇ ಆರೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕಟ್ಟಡವನ್ನು ಸಾರರ್ವಜನಿಕರಿಗೆ ಉಪಯೋಗವಾಗುವ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. 

ಆರೆ ಕಾರ್ ಕಾರ್ ಶೆಡ್ ಅನ್ನು ಪರಿಸರ ಹೋರಾಟಗಾರರು ಮತ್ತು ನಾಗರಿಕ ಗುಂಪುಗಳು ವಿರೋಧಿಸಿದ್ದವು. ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ವಿರುದ್ಧ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಪೊಲೀಸರು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com