ಆನೆ ಮೇಲೆ ಯೋಗಾಸನ ಮಾಡಲು ಹೋಗಿ ಉರುಳಿಬಿದ್ದ ಬಾಬಾ ರಾಮ್ ದೇವ್! ವಿಡಿಯೋ ವೈರಲ್

ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್‌ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದಿದ್ದಾರೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ನವದೆಹಲಿ: ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮ್‌ದೇವ್‌ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದಿದ್ದಾರೆ.

ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮ್‌ದೇವ್‌ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಅಲುಗಾಡಿಸಿದ್ದರಿಂದ ಆಯ ತಪ್ಪಿದ ರಾಮ್‌ದೇವ್‌ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. 

ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದು, ಬಾಬಾ ರಾಮ್‌ದೇವ್‌ ಶೀಘ್ರ ಗುಣಮುಖರಾಗಲಿ ಎಂದು ಹಲವು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com