ವಾಯುಭಾರ ಕುಸಿತ: ಮತ್ತೆರಡು ದಿನ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ವಾಯುಭಾರ ಕುಸಿತ ಇಂದು ಬೆಳಿಗ್ಗೆ ಅಂತಾರಾಷ್ಟ್ರೀಯ ಕಾಲಮಾನ 11.30ರ ವೇಳೆಗೆ ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಸಾಗಿ, ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಪ್ರದೇಶಗಳನ್ನು, 40 ಕಿಲೋಮೀಟರ್ ವೇಗದಲ್ಲಿ ಕಲಬುರಗಿ ಮತ್ತು  ಸೊಲ್ಲಾಪುರದಲ್ಲಿ 110 ಕಿಲೋಮೀಟರ್ ವೇಗದಲ್ಲಿ ಹಾದು ಹೋಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾಯುಭಾರ ಕುಸಿತ ಇಂದು ಬೆಳಿಗ್ಗೆ ಅಂತಾರಾಷ್ಟ್ರೀಯ ಕಾಲಮಾನ 11.30ರ ವೇಳೆಗೆ ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಸಾಗಿ, ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಪ್ರದೇಶಗಳನ್ನು, 40 ಕಿಲೋಮೀಟರ್ ವೇಗದಲ್ಲಿ ಕಲಬುರಗಿ ಮತ್ತು  ಸೊಲ್ಲಾಪುರದಲ್ಲಿ 110 ಕಿಲೋಮೀಟರ್ ವೇಗದಲ್ಲಿ ಹಾದು ಹೋಗಿದೆ.

ಪಶ್ಚಿಮ-ವಾಯವ್ಯ ದಿಕ್ಕಿನತ್ತ ಅದು ಸಾಗಿದ್ದು, ಮುಂದಿನ 12 ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಆನಂತರ ಅಕ್ಟೋಬರ್ 16ರಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿನ ಅರಬ್ಬೀ ಸಮುದ್ರದ ಪೂರ್ವ ಕೇಂದ್ರಿಯ ಭಾಗದತ್ತ ಮತ್ತು ಪಶ್ಚಿಮ-ವಾಯವ್ಯದತ್ತ ಸಾಗುವ ನಿರೀಕ್ಷೆ ಇದೆ. ವಾಯುಭಾರ ಕುಸಿತ ಮತ್ತಷ್ಟು  ತೀವ್ರವಾಗುವ ಸಾಧ್ಯತೆಗಳೂ ಇದ್ದು, ಅದು ಅರಬ್ಬೀ ಸಮುದ್ರದ ಮೂಲಕ ಮಹಾರಾಷ್ಟ್ರ, ದಕ್ಷಿಣ ಗುಜರಾತ್ ನ ಕರಾವಳಿ ಮೂಲಕ ಹಾದು ವಾಯುವ್ಯದತ್ತ ಚಲಿಸುವ ಸಾಧ್ಯತೆ ಇದೆ. ಅಕ್ಟೋಬರ್ 13ರ ಬೆಳಿಗ್ಗೆ 8.30ರಿಂದ 14ರ ಬೆಳಿಗ್ಗೆ 8.30ವರೆಗೆ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ.

ಮಳೆ ಮುನ್ಸೂಚನೆ
ಅಕ್ಟೋಬರ್ 15ರಂದು ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಭಾರಿ ಮಳೆಯಾಗುವ ಸಾದ್ಯತೆ ಇದೆ. ಕರ್ನಾಟಕದ ಕರಾವಳಿಯ ಹಲವು ಪ್ರದೇಶಗಳಲ್ಲಿ, ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ (ದಿನಕ್ಕೆ 20ಸೆಂಟಿಮೀಟರ್ ಗೂ ಅಧಿಕ) ಸಾಧ್ಯತೆ. ಮತ್ತು ಮಧ್ಯ ಮಹಾರಾಷ್ಟ್ರ ಹಾಗೂ ದಕ್ಷಿಣ  ಗುಜರಾತ್ ನಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯ ಮುನ್ಸೂಚನೆ; ಮುಂದಿನ 12 ಗಂಟೆಗಳ ಕಾಲ ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಬಲವಾದ ಗಾಳಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಮತ್ತು ಆನಂತರ ಅದರ ವೇಗ  ತಗ್ಗಲಿದೆ.

ಸಮುದ್ರದ ಸ್ಥಿತಿಗತಿ; ಮಹಾರಾಷ್ಟ್ರ ಮತ್ತು ಗುಜರಾತ್ ನ ಕರಾವಳಿಗೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದಲ್ಲಿ ಅಲೆಗಳ ಏರಿಳಿತವಾಗಲಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ನ ಕರಾವಳಿಗೆ ಹೊಂದಿಕೊಂಡಿರುವ ಅರಬ್ಬೀ ಸಮುದ್ರದಲ್ಲಿ ಅಲೆಗಳ ಏರಿಳಿತವಾಗಿ ಸ್ಥಿತಿ ಪ್ರತಿಕೂಲವಾಗಿರುವ ಸಾಧ್ಯತೆ ಇರುವುದರಿಂದ  ಅಕ್ಟೋಬರ್ 16ರ ನಂತರ ಮೂರು ದಿನಗಳ ಕಾಲ ಮೀನುಗಾರರಿಗೆ ಸಮುದ್ರಕ್ಕೆ ಇಳಿಯುವುದು ಸೂಕ್ತವಲ್ಲ. ಮೀನುಗಾರರು 2020ರ ಅಕ್ಟೋಬರ್ 15ರಂದೇ ದಡಕ್ಕೆ ವಾಪಸ್ಸಾಗಲು ಸೂಚಿಸಲಾಗಿದೆ. ಕರ್ನಾಟಕದಲ್ಲಿ ಮಳೆಯಿಂದ ಬೆಳೆಹಾನಿ; ಮಳೆಯಿಂದಾಗಿ ಭತ್ತ, ಬಾಳೆ, ಪಪ್ಪಾಯ, ನುಗ್ಗೇಕಾಯಿ ಸೇರಿದಂತೆ  ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಭಾರಿ ಮಳೆಯಿಂದಾಗಿ ಕಚ್ಚಾ ರಸ್ತೆ ಹಾಳಾಗಿದೆ. ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ/ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗಿದೆ, ಹಲವೆಡೆ ಭೂ ಕುಸಿತ ಸಂಭವಿಸಿದೆ, ರಸ್ತೆಗಳು ಒದ್ದೆಯಾಗಿದ್ದು, ಜಾರುತ್ತಿವೆ. ಭಾರಿ ಮಳೆಯಿಂದಾಗಿ  ಮತ್ತು ದಿಢೀರ್ ಪ್ರವಾಹದಿಂದಾಗಿ ಒಳಚರಂಡಿ ಕಟ್ಟಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com