ಹರ್ಯಾಣ ಉಪ ಚುನಾವಣೆ: ಬರೋಡಾದಿಂದ ಕ್ರೀಡಾಪಟು ಯೋಗೇಶ್ವರ್ ದತ್ ಕಣಕ್ಕೆ

ಬರೋಡಾ ವಿಧಾನಸಭೆ ಉಪ ಚುನಾವಣಾ ಕ್ಷೇತ್ರದಿಂದ ಒಲಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ಯೋಗೇಶ್ವರ್ ದತ್
ಯೋಗೇಶ್ವರ್ ದತ್

ಚಂಡಿಗಢ್: ಬರೋಡಾ ವಿಧಾನಸಭೆ ಉಪ ಚುನಾವಣಾ ಕ್ಷೇತ್ರದಿಂದ ಒಲಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಕುಸ್ತಿಪಟು ಯೋಗೇಶ್ವರ್ ದತ್ ನವೆಂಬರ್ 3 ರಂದು ನಡೆಯುವ ಸೋನಿಪಟ್ ನ  ಬರೋಡಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ, ಕಳೆದ ಏಪ್ರಿಲ್ ನಲ್ಲಿ ಕಾಂಗ್ರೆಸ್ ನ ಶ್ರೀ ಕೃಷನ್ ಹೂಡಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಮುಖ್ಯಸ್ಥ ಅಮಿತ್ ಶಾ ಮತ್ತು ಹಿರಿಯ ಮುಖಂಡರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಇದಾದ ಒಂದು ದಿನದ ನಂತರ ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಮಂತ್ರಿಗಳಾದ ಬಾದ್‌ಶಾಹಪುರದ ರಾವ್ ನರ್ಬೀರ್ ಸಿಂಗ್ ಮತ್ತು ಫರಿದಾಬಾದ್‌ನ ವಿಪುಲ್ ಗೋಯಲ್ ಅವರಿಗೆ ಟಿಕೆಟ್ ಲಭಿಸಿಲ್ಲ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com