ಕೋವಿಡ್-19 ಚಿಕಿತ್ಸೆ ಪ್ರೊಟೋಕಾಲ್ ನಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಡುವ ಸಾಧ್ಯತೆ

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನಗಳ ಪಟ್ಟಿಯಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಟ್ಟಿದೆ. 

Published: 20th October 2020 08:58 PM  |   Last Updated: 20th October 2020 09:04 PM   |  A+A-


Centre likely to remove plasma therapy from Covid-19 treatment protocol

ಕೋವಿಡ್-19 ಚಿಕಿತ್ಸೆ ಪ್ರೊಟೋಕಾಲ್ ನಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಟ್ಟ ಕೇಂದ್ರ

Posted By : Srinivas Rao BV
Source : Online Desk

ನವದೆಹಲಿ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನಗಳ ಪಟ್ಟಿಯಿಂದ ಪ್ಲಾಸ್ಮಾ ಥೆರೆಪಿಯನ್ನು ಹೊರಗಿಡುವ ಸಾಧ್ಯತೆ ಇದೆ.

ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಲಿದೆ. ಇದಕ್ಕೂ ಮುನ್ನ ಪ್ಲಾಸ್ಮಾ ಥೆರೆಪಿಯನ್ನು ಇನ್ವೆಸ್ಟಿಗೇಷನಲ್ ಟ್ರೀಟ್ಮೆಂಟ್ ರೀತಿಯಲ್ಲಿ ನಡೆಸಲು ಅನುಮತಿ ನೀಡಲಾಗಿತ್ತು. 

ಐಸಿಎಂಆರ್ ನೇತೃತ್ವದಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಪ್ಲಾಸ್ಮಾ ಥೆರೆಪಿಯಿಂದ ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಮಹತ್ವದ ಸಾಧ್ಯತೆ ಕಾಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ಲಾಸ್ಮಾ ಥೆರೆಪಿಯನ್ನು ಪ್ರೊಟೋಕಾಲ್ ನಿಂದ ದೂರವಿಟ್ಟಿದೆ.

ದೇಶಾದ್ಯಂತ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 39 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಗಳು ನಡೆದಿದ್ದು, ರೋಗ ನಿಯಂತ್ರಣ ಹಾಗೂ ಮರಣ ಪ್ರಮಾಣವನ್ನು ತಗ್ಗಿಸುವುದಕ್ಕೆ ಪ್ಲಾಸ್ಮಾ ಥೆರೆಪಿ ಸಹಕರಿಸುವುದಿಲ್ಲ ಎಂಬ ಅಂಶ ಬಹಿರಂಗವಾಗಿದೆ. 

ಇದಕ್ಕೆ ಸಂಬಂಧಿಸಿದ ವಿಶ್ಲೇಷಣಾತ್ಮಕ ಬರಹ ಬ್ರಿಟೀಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಳ್ಳಲಿದೆ. ಪ್ಲಾಸ್ಮಾ ಥೆರೆಪಿಯನ್ನು ನಿಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಶೀಘ್ರವೇ ಅಧಿಕೃತ ಆದೇಶ ಪ್ರಕಟಿಸಲಾಗುತ್ತದೆ ಎಂದು ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp