ಬಿಹಾರ ಚುನಾವಣೆ: ಇಂದು ಪ್ರಧಾನಿ ಮೋದಿ ಪ್ರಚಾರಕ್ಕೆ, ಮೂರು ರ್ಯಾಲಿಗಳಲ್ಲಿ ಭಾಗಿ

ಮೂರು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಬಿಹಾರ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಚಾರ ಆರಂಭಿಸುತ್ತಿದ್ದಾರೆ. ಬಿಹಾರದ ಸಸರಮ್ ನಲ್ಲಿ ಪ್ರಧಾನಿಯವರ ಒಟ್ಟು 12 ರ್ಯಾಲಿಗಳಲ್ಲಿ ಮೊದಲ ರ್ಯಾಲಿ ನಡೆಯಲಿದೆ.

Published: 23rd October 2020 10:43 AM  |   Last Updated: 23rd October 2020 12:38 PM   |  A+A-


PM Narendra Modi

ಪ್ರಧಾನಿ ನರೇಂದ್ರ ಮೋದಿ

Posted By : Sumana Upadhyaya
Source : The New Indian Express

ನವದೆಹಲಿ: ಮೂರು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಬಿಹಾರ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಚಾರ ಆರಂಭಿಸುತ್ತಿದ್ದಾರೆ. ಬಿಹಾರದ ಸಸರಮ್ ನಲ್ಲಿ ಪ್ರಧಾನಿಯವರ ಒಟ್ಟು 12 ರ್ಯಾಲಿಗಳಲ್ಲಿ ಮೊದಲ ರ್ಯಾಲಿ ನಡೆಯಲಿದೆ.

ಇದುವರೆಗೆ ಗೃಹ ಸಚಿವ ಅಮಿತ್ ಶಾ ಬಿಹಾರ ಚುನಾವಣೆ ಪ್ರಚಾರದಿಂದ ದೂರವುಳಿದಿದ್ದಾರೆ. ಅದರ ಬದಲು ಈ ಬಾರಿ ಪ್ರಧಾನಿಯವರೇ ಅಖಾಡಕ್ಕಿಳಿಯುತ್ತಿದ್ದಾರೆ. ಇಂದು ಸಸರಮ್, ಗಯಾ ಮತ್ತು ಬಗಲ್ಪುರಗಳಲ್ಲಿ ರ್ಯಾಲಿ ನಡೆಸಲಿದ್ದಾರೆ.

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಸರಮ್ ಕ್ಷೇತ್ರದಿಂದ ಗೆದ್ದು ಬಂದಿತ್ತು. ಬಿಜೆಪಿಯ ಛೆಡಿ ಪಾಸ್ವಾನ್ ಕಾಂಗ್ರೆಸ್ ನ ಹಿರಿಯ ನಾಯಕಿ ಮೀರಾ ಕುಮಾರ್ ಅವರನ್ನು ಸೋಲಿಸಿದ್ದರು.ಎಡಪಕ್ಷದ ಪ್ರಭಾವ ಮತ್ತು ಉಪೇಂದ್ರ ಕುಶ್ವಾರ್ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯನ್ನು ಸೋಲಿಸಿ ಜೆಡಿಯುನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಇಲ್ಲಿ ಗೆಲ್ಲುವುದು ಈ ಬಾರಿ ಕೂಡ ಅನಿವಾರ್ಯವಾಗಿದೆ.

ಸಸರಮ್ ಮತ್ತು ಗಯಾ ಎರಡೂ ಕ್ಷೇತ್ರಗಳು ದಲಿತರು ಹೆಚ್ಚಾಗಿ ಇರುವ ಕ್ಷೇತ್ರಗಳಾಗಿದ್ದು ಉತ್ತರ ಪ್ರದೇಶದ ಹತ್ರಾಸ್ ಘಟನೆ ಹಿನ್ನೆಲೆಯಲ್ಲಿ ದಲಿತಪರ ತಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಧಾನಿಯವರು ಇಂದಿನ ಪ್ರಚಾರದ ವೇಳೆ ಒತ್ತಿ ಹೇಳುವ ಸಾಧ್ಯತೆಯಿದೆ.

ಬಗಲ್ಪುರದಲ್ಲಿ ಬಿಜೆಪಿ ಹೊಸ ಮುಖವನ್ನು ಈ ಬಾರಿ ಕಣಕ್ಕಿಳಿಸಿದೆ. ಪ್ರಧಾನಿಯಲ್ಲದೆ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಹ ಸ್ಟಾರ್ ಪ್ರಚಾರಕರಾಗಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp