ಸಂಸದೀಯ ಸಮಿತಿ ವಿಚಾರಣೆಗೆ ಹಾಜರಾದ ಫೇಸ್ ಬುಕ್ ಇಂಡಿಯಾ ಮುಖ್ಯಸ್ಥೆ

ದ್ವೇಷಯುಕ್ತ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತಾರತಮ್ಯ ಪಕ್ಷಪಾತ ನಿಲುವು ಅನುಸರಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ಇಂಡಿಯಾದ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್ ಅವರು ಶುಕ್ರವಾರ ಸಂಸದೀಯ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. 
ಅಂಖಿ ದಾಸ್
ಅಂಖಿ ದಾಸ್

ನವದೆಹಲಿ: ದ್ವೇಷಯುಕ್ತ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ತಾರತಮ್ಯ ಪಕ್ಷಪಾತ ನಿಲುವು ಅನುಸರಿಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ಇಂಡಿಯಾದ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್ ಅವರು ಶುಕ್ರವಾರ ಸಂಸದೀಯ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. 

ಅಂಖಿ ದಾಸ್ ಜತೆಗೆ ಫೇಸ್ ಬುಕ್ ಬಿಸಿನೆಸ್ ಮುಖ್ಯಸ್ಥ ಅಜಿತ್ ಮೋಹನ್ ಕೂಡ ಸಮಿತಿ ಮುಂದೆ ಹಾಜರಾಗಿದ್ದಾರೆ. ಡಾಟಾ ಸಂರಕ್ಷಣೆ ಕುರಿತಂತೆ ಇಬ್ಬರನ್ನೂ ಎರಡುಗಂಟೆ ಪ್ರಶ್ನಿಸಲಾಗಿದೆ. 

ಜಾಹೀರಾತು ಅಥವಾ ವ್ಯವಹಾರ ಅಥವಾ ಚುನಾವಣೆಗಳಲ್ಲಿ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ತಾರ್ಕಿಕ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ ಎಂದೂ ಅವರಿಗೆ ತಿಳಿಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಾಟಾ ಸಂರಕ್ಷಣೆಗಾಗಿ ಫೇಸ್ ಬುಕ್ ತನ್ನ ಆದಾಯದ ಎಷ್ಟು ಭಾಗವನ್ನು ಮೀಸಲಿರಿಸಿದೆ ಎಂಬ ನಿರ್ದಿಷ್ಟ ಪ್ರಶ್ನೆಯನ್ನೂ ಅವರಿಗೆ ಕೇಳಲಾಯಿತು. ಜತೆಗೆ ಫೇಸ್ ಬುಕ್ ಗೆ ಭಾರತದಲ್ಲಿ ಎಷ್ಟು ಆದಾಯ ದೊರೆಯುತ್ತಿದೆ ಹಾಗೂ ಎಷ್ಟು ತೆರಿಗೆ ಪಾವತಿಸುತ್ತಿದೆ ಎಂಬುದನ್ನೂ ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ಟ್ವಿಟ್ಟರ್ ಮತ್ತು ಅಮೆಝಾನ್ಗೂ ಸಮಿತಿ ಮುಂದೆ ಇದೆ 28ರಂದು ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ತಜ್ಞರು ವಿದೇಶಗಳಲ್ಲಿ ಇರುವುದರಿಂದ, ಜೊತೆಗೆ ಕೋವಿಡ್ ಸಮಸ್ಯೆಯಿಂದ ಇಲ್ಲಿಗೆ ಆಗಮಿಸಲು ಸಾಧ್ಯವಿಲ್ಲದೇ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಮೆಜಾನ್ ಹೇಳಿದೆ.

ಅಮೆಜಾನ್ ವಿಚಾರಣೆಗೆ ಹಾಜರಾಗಲು ನಿರಾಕರಿಸಿರುವುದು ಸವಲತ್ತಿನ ಹಕ್ಕುಚ್ಯುತಿ ಎಂದು ಸಂಸತ್ ಮೂಲಗಳು ಆರೋಪಿಸಿ ವಿಚಾರಣೆಗೆ ಹಾಜರಾಗಲು ವಿಫಲರಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com