ಹತ್ರಾಸ್, ಬಲ್ಲಿಯಾ ಆರೋಪಿಗಳನ್ನು ಸಮರ್ಥಿಸಿಕೊಂಡ ಕರ್ಣಿ ಸೇನಾ 

ಕರ್ಣಿ ಸೇನಾ ಸಂಘಟನೆ ಹತ್ರಾಸ್, ಬಲ್ಲಿಯಾ ಆರೋಪಿಗಳ ಬೆಂಬಲಕ್ಕೆ ಧಾವಿಸಿದೆ. 
ಹತ್ರಾಸ್, ಬಲ್ಲಿಯಾ ಆರೋಪಿಗಳನ್ನು ಸಮರ್ಥಿಸಿಕೊಂಡ ಕರ್ಣಿ ಸೇನಾ
ಹತ್ರಾಸ್, ಬಲ್ಲಿಯಾ ಆರೋಪಿಗಳನ್ನು ಸಮರ್ಥಿಸಿಕೊಂಡ ಕರ್ಣಿ ಸೇನಾ

ಲಖನೌ: ಕರ್ಣಿ ಸೇನಾ ಸಂಘಟನೆ ಹತ್ರಾಸ್, ಬಲ್ಲಿಯಾ ಆರೋಪಿಗಳ ಬೆಂಬಲಕ್ಕೆ ಧಾವಿಸಿದೆ. 

ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ಣಿ ಸೇನಾ ಆರೋಪಿಗಳ ಪರ ನಿಂತಿದೆ. ಅ.15 ರಂದು ಬಲ್ಲಿಯಾ ಪಂಚಾಯ್ತಿ ಸಭೆಯಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಭೇಟಿ ಮಾಡಲು ಹೋಗುತ್ತಿದ್ದ ನಿಯೋಗವನ್ನು ಪೊಲೀಸರು ತಡೆದಿದ್ದಾರೆ. 

ಕರ್ಣಿ ಸೇನಾದ ಹಿರಿಯ ಉಪಾಧ್ಯಕ್ಷ ದ್ರುವ್ ಕುಮಾರ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ರೇಷನ್ ಅಂಗಡಿಗಳ ವಿತರಣೆಯ ಸಂದರ್ಭದಲ್ಲಿ ಮತ್ತೊಂದು ಗುಂಪು ಆರೋಪಿ ಧಿರೇಂದ್ರ ಅವರ 84 ವರ್ಷದ ತಂದೆಯೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಈ ಕಾರಣದಿಂದಾಗಿ ಧಿರೇಂದ್ರ ಶೂಟೌಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. 

ಈ ಹಿಂದೆ ಬೈರಿಯಾದ ಬಿಜೆಪಿ ಶಾಸಕ ಸಹ ಧಿರೇಂದ್ರ ಪ್ರತಾಪ್ ನ್ನು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಹತ್ರಾಸ್ ಆರೋಪಿಗಳನ್ನು ಸಮರ್ಥಿಸಿಕೊಂಡಿದ್ದು, ಆರೋಪಿ ಹಾಗೂ ಸಂತ್ರಸ್ತೆಯ ನಡುವೆ 104 ಕರೆಗಳು ಆಗಿವೆ ಈಗ ಪ್ರಕರಣಕ್ಕೆ ಹೊಸ ಬಣ್ಣ ಬಂದಿದೆ. ಘಟನೆ ನಡೆದ ಸಮಯದಲ್ಲಿ ಆರೋಪಿಗಳ ಮೊಬೈಲ್ ಲೊಕೇಷನ್ ಎಲ್ಲಿತ್ತು ಎಂಬುದನ್ನು ಸಿಬಿಐ ಬಹಿರಂಗಪಡಿಸಬೇಕೆಂದು ಕರ್ಣಿ ಸೇನಾ ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com