ನಾವು ಬಿಜೆಪಿ ವಿರೋಧಿಗಳೇ ಹೊರತು ರಾಷ್ಟ್ರ ವಿರೋಧಿಗಳಲ್ಲ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್(ಪಿಎಜಿಡಿ) ಬಿಜೆಪಿ ವಿರೋಧಿ ವೇದಿಕೆಯಾಗಿದೆ ಹೊರತು ರಾಷ್ಟ್ರ ವಿರೋಧಿಯಲ್ಲ ಎಂದು ನಾಷನಲ್ ಕಾನ್ಫರೇನ್ಸ್(ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಪಿಎಜಿಡಿ ಸದಸ್ಯರು
ಪಿಎಜಿಡಿ ಸದಸ್ಯರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್(ಪಿಎಜಿಡಿ) ಬಿಜೆಪಿ ವಿರೋಧಿ ವೇದಿಕೆಯಾಗಿದೆ ಹೊರತು ರಾಷ್ಟ್ರ ವಿರೋಧಿಯಲ್ಲ ಎಂದು ನಾಷನಲ್ ಕಾನ್ಫರೇನ್ಸ್(ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

"ಪಿಎಜಿಡಿ ರಾಷ್ಟ್ರ ವಿರೋಧಿ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಇದು ನಿಜವಲ್ಲ ಎಂದು ನಾನು ಹೇಳ ಬಯಸುತ್ತೇನೆ. ನಾವು ಬಿಜೆಪಿ ವಿರೋಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪಿಎಜಿಡಿ ರಾಷ್ಟ್ರ ವಿರೋಧಿ ಅಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ನಿವಾಸದಲ್ಲಿ ನಡೆದ ಮೊದಲ ಸಭೆಯ ನಂತರ ಶ್ರೀನಗರದ ಲೋಕಸಭಾ ಸದಸ್ಯರನ್ನು ಪಿಎಜಿಡಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

370ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವಂತಹ ಕೃತ್ಯಗಳ ಮೂಲಕ ಸಂಯುಕ್ತ ವ್ಯವಸ್ಥೆಯನ್ನು ಮುರಿಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಅಬ್ದುಲ್ಲಾ ಆರೋಪಿಸಿದರು. 

ಬಿಜೆಪಿ ದೇಶದ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸಿದೆ. ರಾಷ್ಟ್ರವನ್ನು ವಿಭಜಿಸಲು ಪ್ರಯತ್ನಿಸಿದೆ. ಸಂಯುಕ್ತ ವ್ಯವಸ್ಥೆಯನ್ನು ಮುರಿಯಲು ಬಿಜೆಪಿ ಕಳೆದ ವರ್ಷ ಆಗಸ್ಟ್ 5ರಂದು ಏನು ಮಾಡಿದ್ದಾರೆಂದು ನಾವು ನೋಡಿದ್ದೇವೆ ಎಂದು ಎನ್‌ಸಿ ಅಧ್ಯಕ್ಷರು ಹೇಳಿದರು.

"ಪಿಎಜಿಡಿ ರಾಷ್ಟ್ರ ವಿರೋಧಿ ಜಮಾಅತ್ ಅಲ್ಲ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ. ಜಮ್ಮು ಕಾಶ್ಮೀರದ ಜನರು ಮತ್ತು ಲಡಾಖ್ ಜನರು ತಮ್ಮ ಹಕ್ಕುಗಳನ್ನು ಮರಳಿ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಅಲ್ಲಿಯೇ ನಮ್ಮ ಯುದ್ಧವಿದೆ. ನಮ್ಮ ಯುದ್ಧವು ಅದಕ್ಕಿಂತ ಕಡಿಮೆಯಿಲ್ಲ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com