ಇಡೀ ಬಿಹಾರ ನನ್ನ ಕುಟುಂಬ, ಜನರ ಸೇವೆ ಮಾಡುವುದು ನನ್ನ ಕರ್ತವ್ಯ: ನಿತೀಶ್ ಕುಮಾರ್

ಪ್ರತಿಪಕ್ಷಗಳ ಕುಟುಂಬ ರಾಜಕಾರಣದ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇಡೀ ಬಿಹಾರ ನನ್ನ ಕುಟುಂಬ, ಜನರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್

ಮಧುಬಾನಿ: ಪ್ರತಿಪಕ್ಷಗಳ ಕುಟುಂಬ ರಾಜಕಾರಣದ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇಡೀ ಬಿಹಾರ ನನ್ನ ಕುಟುಂಬ, ಜನರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

ಇಂದು ಫುಲ್ಪಾರಸ್ ಕ್ಷೇತ್ರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ನಿತೀಶ್ ಕುಮಾರ್, ಇತರರಿಗೆ, ಹೆಂಡತಿ, ಮಗ, ಮಗಳು ಮತ್ತು ಇತರ ಸಂಬಂಧಿಗಳು ಮಾತ್ರ ಅವರ ಕುಟುಂಬ. ಆದರೆ ನನಗೆ ಇಡೀ ಬಿಹಾರ ನನ್ನ ಕುಟುಂಬ. ಜನರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.

"ಬಿಹಾರವು ಕರುಣಾಜನಕ ಪರಿಸ್ಥಿತಿಯಲ್ಲಿದೆ. ಇಲ್ಲಿ ಸಾಕಷ್ಟು ಅಪರಾಧಗಳು ಸಂಭವಿಸಿವೆ. ಅಭಿವೃದ್ಧಿ ದರವು ಬಹುತೇಕ ಶೂನ್ಯವಾಗಿತ್ತು. ನಾವು ಎಲ್ಲವನ್ನೂ ನಿಯಂತ್ರಿಸಿದ್ದೇವೆ. ನಾವು ನ್ಯಾಯದೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತೇವೆ ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದೇವೆ" ಎಂದರು.

ಕಾಂಗ್ರೆಸ್ ನ ಕೃಪನಾಥ ಠಾಕೂರ್ ಮತ್ತು ಲೋಕ ಜನ ಶಕ್ತಿ ಪಕ್ಷದ ಬೊನೊದ್ ಕುಮಾರ್ ಸಿಂಗ್ ವಿರುದ್ಧ ಸ್ಪರ್ಧಿಸಲು ಜೆಡಿಯು ಫುಲ್ಪಾರಸ್ ನಿಂದ ಶೀಲಾ ಮಂಡಲ್ ಅವರನ್ನು ಕಣಕ್ಕಿಳಿಸಿದೆ. 2015 ರಲ್ಲಿ ಬಿಹಾರದಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಜೆಡಿಯುನ ಗುಲ್ಜಾರ್ ದೇವಿ ಈ ಕ್ಷೇತ್ರದಿಂದ ಗೆದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com