ಇಡೀ ದೇಶ ರಾವಣ ದಹನ ಮಾಡಿದರೆ ಈ ಒಂದು ಗ್ರಾಮ ಮಾತ್ರ ರಾವಣನನ್ನು ಪೂಜಿಸುತ್ತದೆ! 

ರಾವಣ... ಹೆಸರು ಕೇಳಿದ ಕೂಡಲೇ ರಾಕ್ಷಸ, ದುಷ್ಟ, ಪರಸತಿ ವ್ಯಾಮೋಹಿ, ಭಯಂಕರ. ದುರುಳ ಹೀಗೆ ಒಳ್ಳೆಯದಕ್ಕಿಂತಲೂ ಕೆಟ್ಟ ಬಿರುದುಗಳೇ ನೆನಪಾಗುತ್ತವೆ. ದಸರಾ ಹಬ್ಬದ ದಿನದಂದು ಕೆಟ್ಟದ್ದನ್ನು ಸೂಚಿಸುವ ರಾವಣನ ಬೃಹತ್ ಪ್ರತಿಮೆ ತಯಾರಿಸಿ ಹಲವೆಡೆ ಸುಡಲಾಗುತ್ತದೆ. ಅಂದರೆ, ದುಷ್ಚರ ವಿರುದ್ಧ ವಿಜಯವನ್ನು ಸಾಧಿಸುವ ಹಬ್ಬವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾವಣನ ಪ್ರತಿಮೆಯನ್ನು ದಹಿಸುತ್ತಿರುವುದು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾವಣನ ಪ್ರತಿಮೆಯನ್ನು ದಹಿಸುತ್ತಿರುವುದು

ಅಕೋಲಾ: ರಾವಣ... ಹೆಸರು ಕೇಳಿದ ಕೂಡಲೇ ರಾಕ್ಷಸ, ದುಷ್ಟ, ಪರಸತಿ ವ್ಯಾಮೋಹಿ, ಭಯಂಕರ. ದುರುಳ ಹೀಗೆ ಒಳ್ಳೆಯದಕ್ಕಿಂತಲೂ ಕೆಟ್ಟ ಬಿರುದುಗಳೇ ನೆನಪಾಗುತ್ತವೆ. ದಸರಾ ಹಬ್ಬದ ದಿನದಂದು ಕೆಟ್ಟದ್ದನ್ನು ಸೂಚಿಸುವ ರಾವಣನ ಬೃಹತ್ ಪ್ರತಿಮೆ ತಯಾರಿಸಿ ಹಲವೆಡೆ ಸುಡಲಾಗುತ್ತದೆ. ಅಂದರೆ, ದುಷ್ಚರ ವಿರುದ್ಧ ವಿಜಯವನ್ನು ಸಾಧಿಸುವ ಹಬ್ಬವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. 

ಇಂದು ಭಾರತದೆಲ್ಲೆಡೆ ರಾವಣನ ಪ್ರತಿಮೆಯನ್ನು ಸುಟ್ಟು ಹಬ್ಬವನ್ನು ಆಚರಿಸುತ್ತಿರುವಾಗಲೇ ಮತ್ತೊಂದೆಡೆ ಇದೇ ನೆಲದಲ್ಲಿ ರಾಕ್ಷಸರ ರಾಜ, ಲಂಕಾಧಿಪತಿಯನ್ನು ಪೂಜಿಸುವ ಗ್ರಾಮವೂ ಇದೆ. 

ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ರಾವಣ ಶಿವಭಕ್ತನಾಗಿದ್ದ. ತನ್ನ ಕಠೋರ ತಪ್ಪಿಸ್ಸಿನಿಂದ ಶಿವನನ್ನೇ ಒಲಿಸಿಕೊಂಡಿವನಾಗಿದ್ದ. ಭಾರತದ ಉದ್ದಗಲಗಳಲ್ಲಿಯೂ ರಾವಣ ಚಲಿಸಿದ ಕುರುಹುಗಳಿವೆ. ತನ್ನ ಅಸೀಮ ಬಲದಿಂದ ರಾವಣ ಕೈಲಾಸ ಪರ್ವತವನ್ನೂ ಅಲುಗಾಡಿಸಿದ್ದ, ಸಾಕ್ಷಾತ್ ಶಿವನಿಂದಲೇ ಲಿಂಗವನ್ನು ಪಡೆದವನಾಗಿದ್ದನೆಂದು ಪೌರಾಣಿಕ ಕತೆಗಳಲ್ಲಿ ಹೇಳಲಾಗುತ್ತದೆ.

ಯಧ್ಬಾವಂ ತದ್ಭವತಿ ಎನ್ನುವಂತೆ ಅವರವರ ಭಾವಕ್ಕೆ ಅವರವರ ಭಕುತಿಗೆ ಅನುಗುಣವಾಕಿ ಕೆಲವರು ರಾಮನನ್ನು ಪೂಜಿಸಿದೆ, ಕೆಲವರು ರಾವಣನನ್ನು ಪೂಜಿಸುತ್ತಿದ್ದಾರೆ. 

ಇದರಂತೆ ಮಹಾರಾಷ್ಟ್ರದಲ್ಲಿರುವ ಇದೊಂದು ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ರಾವಣವನ್ನು ಪೂಜಿಸಿ, ಆರಾಧಿಸಲಾಗುತ್ತಿದೆ. 

ಮಹಾರಾಷ್ಟ್ರದ ಅಕೋಲಾ ಎಂಬ ಜಿಲ್ಲೆಯಲ್ಲಿ ರಾವಣವನನ್ನು ಪೂಜಿಸಲಾಗುತ್ತಿದೆ. ಈ ಗ್ರಾಮದಲ್ಲಿ ರಾವಣನ ಬೃಹತ್ ಪ್ರತಿಮೆಯಿದ್ದು, ಪ್ರತಿಮೆಯು 10 ತಲೆ ಹಾಗೂ 20 ಕೈಗಳನ್ನು ಹೊಂದಿದೆ. 

ರಾವಣನ ಬುದ್ಧಿಶಕ್ತಿ ಹಾಗೂ ಆತನ ತಪಸ್ವಿ ಗುಣಗಳನ್ನು ಇಲ್ಲಿ ಆರಾಧಿಸಲಾಗುತ್ತದೆ. ಕಳೆದ 200 ವರ್ಷಗಳಿಂದಲೂ ಈ ಗ್ರಾಮದಲ್ಲಿ ರಾವಣನನ್ನು ಪೂಜಿಸಲಾಗುತ್ತಿದೆ ಎಂದು ಇಲ್ಲಿನ ಗ್ರಾಮಸ್ಥರೊಬ್ಬರು ಹೇಳಿದ್ದಾರೆ. 

ದಸರಾ ಸಂದರ್ಭದಲ್ಲಿ ದೇಶದ ಉಳಿದ ಭಾಗದಲ್ಲಿ ರಾವಣನ ಪ್ರತಿಮೆಯನ್ನು ಸುಡುತ್ತಾರೆ. ದುಷ್ಟರ ವಿರುದ್ಧ ಒಳಿತು ಗೆಲವು ಸಾಧಿಸುವ ಸಂಕೇತ ಇದಾಗಿದೆ. ಆದರೆ, ಸಂಗೋಲಾದ ನಿವಾಸಿಗಳು ರಾಕ್ಷಸ ರಾಜನ ಬುದ್ಧಿವಂತಿಗೆ ಹಾಗೂ ಆತನಲ್ಲಿದ್ದ ತಪಸ್ವಿ ಗುಣಗಳಿಗಾಗಿ ಪೂಜಿಸುತ್ತಾರೆಂದು ಗ್ರಾಮದ ಅರ್ಚಕರೊಬ್ಬರು ಹೇಳಿದ್ದಾರೆ. 

ನಾನು ಮತ್ತು ನನ್ನ ಕುಟುಂಬದ ಪ್ರತೀಯೊಬ್ಬರೂ ರಾವಣನನ್ನು ಪೂಜಿಸುತ್ತಿದ್ದೇವೆ. ಹಳ್ಳಿಯಲ್ಲಿರುವ ಸಂತೋಷ, ಶಾಂತಿ ಹಾಗೂ ಸಂತೃಪ್ತಿಗೆ ಲಂಕಾ ರಾಜನೇ ಕಾರಣ ಎಂದು ತಿಳಿಸಿದ್ದಾರೆ. 

ಇನ್ನು ಹಳ್ಳಿಯಲ್ಲಿರುವ ಕೆಲ ಹಿರಿಯರು ರಾವಣನನ್ನು ವಿದ್ವಾಂಸ ಎಂದು ಕೊಂಡಾಡಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ರಾವಣನ ಸೀತೆಯನ್ನು ಅಪಹರಣ ಮಾಡಿದ್ದ. ಆದರೆ, ಆಕೆಯ ಪಾವಿತ್ರ್ಯತೆಯನ್ನು ಕಾಪಾಡಿದ್ದ ಎಂದು ಎಂದು ಹೇಳಿದ್ದಾರೆ. 

ಇನ್ನೂ ಕೆಲವರು ರಾಮನನ್ನು ನಂಬುತ್ತಾರೆ. ಅದರ ಜೊತೆಗೆ ರಾಣನನ್ನು ನಂಬುತ್ತಾರೆ. ಆದರೆ, ರಾವಣನ ಪ್ರತಿಮೆಯನ್ನು ಸುಡುತ್ತಿಲ್ಲ. 

ಈ ನಡುವೆ ದಸರಾ ಸಂದರ್ಭದಲ್ಲಿ ಕೆಲ ಪ್ರವಾಸಿಗರು ಈ ಗ್ರಾಮಕ್ಕೆ ಭೇಟಿ ನೀಡಲಿದ್ದು, ರಾವಣನ ಪ್ರತಿಮೆಯನ್ನು ವೀಕ್ಷಿಸುತ್ತಾರೆ. ಇನ್ನೂ ಕೆಲವರು ಪೂಜೆಯನ್ನೂ ಕೂಡ ಸಲ್ಲಿಸುತ್ತಾರೆ. ಕೊರೋನಾ ಸಾಂಕ್ರಾಮಿಕ ಆರಂಭವಾಗಿರುವುದರಿಂದ ಈ ಬಾರಿಯ ಹಬ್ಬವು ಕಳೆಗುಂದಿದೆ ಎಂದು ಗ್ರಾಮದ ಅರ್ಚಕರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com