ಕಮಲ್ ನಾಥ್, ದಿಗ್ವಿಜಯ 'ಅತಿದೊಡ್ಡ 'ಗದ್ದರ್' ಗಳು, ಉಪಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಖಚಿತ: ಸಿಂಧಿಯಾ

ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶದ "ಅತಿದೊಡ್ಡ ಗದ್ದರ್ ಗಳು" ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದ್ದಾರೆ. "ಭ್ರಷ್ಟ" ಸರ್ಕಾರವನ್ನು ನಡೆಸುವ ಮೂಲಕ ಮತದಾರರ ನಂಬಿಕೆಗೆ ದ್ರೋಹ ಬಗೆದಿದ್ದ ಕಮಲ್ ನಾಥ್ ಸರ್ಕಾರದಿಂದ ಜನರ ಸಮಸ್ಯೆಗಳು ಹೆಚ್ಚಾದ ಕಾರಣ ತಾವು ಕಾಂಗ್ರೆಸ್ ತೊರೆಯಬೇಕಾಯಿತು ಎಂದರು.
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶದ "ಅತಿದೊಡ್ಡ ಗದ್ದರ್ ಗಳು" ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದ್ದಾರೆ. "ಭ್ರಷ್ಟ" ಸರ್ಕಾರವನ್ನು ನಡೆಸುವ ಮೂಲಕ ಮತದಾರರ ನಂಬಿಕೆಗೆ ದ್ರೋಹ ಬಗೆದಿದ್ದ ಕಮಲ್ ನಾಥ್ ಸರ್ಕಾರದಿಂದ ಜನರ ಸಮಸ್ಯೆಗಳು ಹೆಚ್ಚಾದ ಕಾರಣ ತಾವು ಕಾಂಗ್ರೆಸ್ ತೊರೆಯಬೇಕಾಯಿತು ಎಂದರು.

ರಾಜ್ಯದಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿರುವ 28 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಸಿಂಧಿಯಾ ಅವರು ಚುನಾವಣೆಗೆ ಸಜ್ಜಾಗಿರುವ  28 ವಿಧಾನಸಭಾ ಸ್ಥಾನಗಳಲ್ಲಿ 27 ಸ್ಥಾನಗಳು ಕಾಂಗ್ರೆಸ್ ಪಕ್ಷದ್ದಾಗಿದೆ. ಆದ್ದರಿಂದ ಬಿಜೆಪಿಗೆ ಗೆಲ್ಲಲು ಎಲ್ಲಾ ಸಾಧ್ಯತೆಗಳಿದೆ. ಆದರೆ ಕಾಂಗ್ರೆಸ್ ಮಾತ್ರ ಎಲ್ಲವನ್ನೂ ಕಳೆದುಕೊಳ್ಲಲಿದೆ ಎಂದರು.

ಸಿಂಧಿಯಾ ಅವರ ನಿಷ್ಠಾವಂತ 22 ಬಂಡಾಯ ಕಾಂಗ್ರೆಸ್ ಶಾಸಕರು ಈ ವರ್ಷದ ಮಾರ್ಚ್‌ನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಮಧ್ಯಪ್ರದೇಶದಲ್ಲಿ 15 ತಿಂಗಳ ಅವಧಿಯ ಕಮಲ್ ನಾಥ್ ಸರ್ಕಾರ ಪತನವಾಗಿತ್ತು. ಇದೀಗ ಆ ಸ್ಥಾನಗಳಿಗೆಉಪಚುನಾವಣೆ ನಡೆಯುತ್ತಿದೆ. ಇದಾಗಿ ಕೆಲ ದಿನಗಳ ನಂತರ  ಇನ್ನೂ ಮೂವರು ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು, ಆದರೆ ಹಾಲಿವ ಶಾಸಕರ ಸಾವಿನಿಂದಾಗಿ ಇನ್ನೂ ಮೂರು ಸ್ಥಾನಗಳು ಖಾಲಿಯಾಗಿವೆ. "ಸರ್ಕಾರ ರಚಿಸುವ ಸಾಧ್ಯತೆಯ ಬಗ್ಗೆ  ಯೋಚಿಸಲು ಕಾಂಗ್ರೆಸ್ 28 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕಾಗಿದೆ ಮತ್ತು ಅವರು ಬಿಜೆಪಿಗೆ ಸೇರ್ಪಡೆಯಾದ ಮತ್ತೊಬ್ಬ ಶಾಸಕರನ್ನು (ರಾಹುಲ್ ಲೋಧಿ)ಯನ್ನೂ ಕಳೆದುಕೊಂಡಿದ್ದಾರೆ. ತಳಮಟ್ಟದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ನ ಹಾಲಿ ಶಾಸಕರಲ್ಲಿಯೂ ಜನರಿಗೆ ಯಾವುದೇ ಭರವಸೆ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ ”ಎಂದು ಸಿಂಧಿಯಾ ಹೇಳಿದ್ದಾ

"ನೀವು ಬೇರೆ ಯಾವುದೇ ರಾಜ್ಯದಲ್ಲಿ ಶಾಸಕರನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ರಾಜೀನಾಮೆ ಸಲ್ಲಿಸಿದ್ದನ್ನು ನೋಡಿದ್ದೀರೆಂದು ನಾನು ಭಾವಿಸುವುದಿಲ್ಲ - ಸುಮಾರು 30 ಪ್ರತಿಶತದಷ್ಟು ಶಾಸಕರು ತಮ್ಮ ಮಾತೃಪಕ್ಷ ಬಿಟ್ಟು ಹೊರಹೋಗುವುದುಇದು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕತ್ವದಲ್ಲಿ ನಂಬಿಕೆಯ  ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಚಾರದ ವೇಳೆ ಕಾಂಗ್ರೆಸ್ಸಿಗರು 'ಗದ್ದರ್' ಎಂದು ಕರೆಯುವಾಗ, ಸಿಂಧಿಯಾ ಅವರು ರಾಜಕೀಯದಲ್ಲಿ ಸಾಮಾನ್ಯವಾಗಿ ಬಳಸುವ ಪದವಿದಲ್ಲಏಕೆಂದರೆ ರಾಜಕೀಯದಲ್ಲಿ ಒಂದು ನಿರ್ದಿಷ್ಟ ಮಟ್ಟ ಇರಬೇಕು  ಎಂದಿದ್ದಾರೆ.

"ಅವರು ನಿಜವಾಗಿಯೂ ಆ ಪದವನ್ನು ಬಳಸುತ್ತಿದ್ದರೆ ಮಧ್ಯಪ್ರದೇಶದ ಅತಿದೊಡ್ಡ ಗದ್ದರ್ ಗಳು ((ದೇಶದ್ರೋಹಿಗಳು) ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್  ಆಗಿದ್ದಾರೆ.  ಅವರು ಏಳೂವರೆ ಕೋಟಿ ಜನರ ಗದ್ದರ್ ಗಳಿದ್ದಾರೆ.  ಏಕೆಂದರೆ ಯಾವುದೇ ಭರವಸೆಗಳು ಈಡೇರಿಲ್ಲ, ರಾಜ್ಯದ ಜನರಿಗೆ ಸೇವೆ ಮಾಡುವ ಬದಲು ಅಧಿಕಾರ ಮತ್ತು ಕುರ್ಚಿಗೆ ಅಂಟಿಕೊಂಡಿದ್ದರು."ಎಂದು ಸಿಂಧಿಯಾ ಹೇಳಿದರು.

ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಬಗ್ಗೆ ಕಮಲ್ ನಾಥ್ ಅವರ 'ಐಟಂ' ಪದ ಬಳಕೆ ಬಗ್ಗೆ  ಮಾತನಾಡಿದ ಸಿಂಧಿಯಾ ಜನನಾಯಕರೆನಿಸಿದವರು ಕೆಲವು ಮೌಲ್ಯಗಳು ಮತ್ತು ನೈತಿಕತೆಗಳಿಗೆ ಬದ್ಧರಾಗಿರಬೇಕು ಮತ್ತು ಮಾದರಿಯಾಗಿರಬೇಕು ಎಂದರು. ತಳಮಟ್ಟದಿಂದ ಮೇಲೇರಿ, ಸರ್ಪಂಚ್ ಚುನಾವಣೆಯಲ್ಲಿ ಹೋರಾಡಿ, ಮೂರು ಬಾರಿ ಶಾಸಕರಾದ ಮತ್ತು ಕಮಲ್ ನಾಥ್ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ಮಹಿಳೆಯೊಬ್ಬರ ಮೇಲೆ ಈ ರೀತಿ ಪದಬಳಕೆ ಮಾಡಲಾಗಿದೆ "ಕಮಲ್ ನಾಥ್ ಅವರು ಶಾಸಕಿಯ  ಹೆಸರನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ, ಇದು ಅವರ ಅಧಿಕಾರದ ದುರಹಂಕಾರವನ್ನು ತೋರಿಸುತ್ತದೆ,ಅವರ ಕ್ಯಾಬಿನೆಟ್ ನ ಭಾಗವಾಗಿದ್ದ ಸಹೋದ್ಯೋಗಿಯ ಹೆಸರನ್ನು ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುವುದು ದುರಹಂಕಾರವಲ್ಲದೆ ಏನು? ದಲಿತ ಮಹಿಳೆ ಯೊಬ್ಬರನ್ನು  "ಐಟಂ" ಎಂದು ಕರೆಯುತ್ತಾರೆ, ಇದು ಮಹಿಳೆಯರು ಮತ್ತು ದಲಿತರ ಬಗ್ಗೆ ಅವರ ಮನಸ್ಥಿತಿಯನ್ನು ಹೇಳುತ್ತದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಎರಡು-ಮೂರು ವರ್ಷಗಳ ಹಿಂದೆ ಮೀನಾಕ್ಷಿ ನಟರಾಜನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸಿಂಧಿಯಾ ಆರೋಪಿಸಿದ್ದಾರೆ "ಇದು ಮಹಿಳೆಯರು ಮತ್ತು ಪರಿಶಿಷ್ಟ ಜಾತಿಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಮನೋಭಾವವನ್ನು ತೋರಿಸುತ್ತದೆ ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಜೀವಂತವಾಗಿದ್ದರೆ, ಅವರು ತುಂಬಾ ದುಃಖಿತರಾಗುತ್ತಿದ್ದರು,ನೋವು ಅನುಭವಿಸುತ್ತಿದ್ದರು" ಸಿಂಧಿಯಾ ಹೇಳಿದರು.

"ನನ್ನ ಮಟ್ಟಿಗೆ, ರಾಜಕೀಯ ಸೇವೆಯು ಸಾರ್ವಜನಿಕ ಸೇವೆಯ ಆ ಗುರಿಯನ್ನು ತಲುಪಲು ಸಾಧ್ಯವಾಗುವ ಮಾಧ್ಯಮವಾಗಿದೆ. ಹಾಗಾಗಿ ನನಗೆ ರಾಜಕೀಯ ಮುಖ್ಯವಲ್ಲ, ಮುಖ್ಯವಾದುದು ಸಾರ್ವಜನಿಕ ಸೇವೆಯೇ ಆಗಿದೆ. ಅದುವೇ ನನ್ನ ಗುರಿ." ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com