ಕಳಪೆ ನೈರ್ಮಲ್ಯ, ನೀರಿನ ಗುಣಮಟ್ಟವಿರುವ ರಾಷ್ಟ್ರಗಳಲ್ಲಿ ಕೋವಿಡ್ ಸಾವಿನ ಪ್ರಮಾಣ ಕಡಿಮೆ: ಅಧ್ಯಯನ

ಉತ್ತಮ ನೈರ್ಮಲ್ಯವನ್ನು ಹೊಂದಿರುವ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ, ಕಳಪೆ ನೈರ್ಮಲ್ಯ, ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಹೊಂದಿರುವ ರಾಷ್ಟ್ರಗಳಲ್ಲಿ ಕೋವಿಡ್-19 ಸಾವಿನ ಪ್ರಮಾಣ ಕಡಿಮೆ ಇರುವುದನ್ನು ಅಧ್ಯಯನವೊಂದು ಕಂಡುಹಿಡಿದಿದೆ.

Published: 26th October 2020 03:18 PM  |   Last Updated: 26th October 2020 03:37 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: ಉತ್ತಮ ನೈರ್ಮಲ್ಯವನ್ನು ಹೊಂದಿರುವ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ, ಕಳಪೆ ನೈರ್ಮಲ್ಯ, ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಹೊಂದಿರುವ ರಾಷ್ಟ್ರಗಳಲ್ಲಿ ಕೋವಿಡ್-19 ಸಾವಿನ ಪ್ರಮಾಣ ಕಡಿಮೆ ಇರುವುದನ್ನು ಅಧ್ಯಯನವೊಂದು ಕಂಡುಹಿಡಿದಿದೆ.

ಭಾರತದಲ್ಲಿನ ಸಂಶೋಧಕರ ಇತ್ತೀಚಿನ ವಿಶ್ಲೇಷಣೆಯು "ನೈರ್ಮಲ್ಯದ ಪರಿಕಲ್ಪನೆಯನ್ನು ಬೆಂಬಲಿಸುವ ಸಾಕ್ಷ್ಯಾಧಾರಗಳನ್ನು ಹೆಚ್ಚಿಸುತ್ತಿದೆ. 

ಶುಕ್ರವಾರ ಬೆಳಗ್ಗೆಯವರೆಗೂ ಕೋವಿಡ್-19 ಪ್ರಕರಣಗಳು 77, 61, 312 ಆದರೂ ಸಾವಿನ ಸಂಖ್ಯೆ 1, 17, 306 ಆಗಿದೆ. ಅದರರ್ಥ ಶೇ.1.5 ರಷ್ಟು ಮರಣ ಪ್ರಮಾಣವನ್ನು ಹೊಂದಿದ್ದು, ಜಾಗತಿಕವಾಗಿ ಕಡಿಮೆ ಎನಿಸಿದೆ. ಬಿಹಾರದಲ್ಲಿ ಶೇ. 0.5 ರಷ್ಟು ಸಾವಿನ ಪ್ರಮಾಣವಿದ್ದು, ಕೇರಳ ಮತ್ತು ಅಸ್ಸಾಂನಲ್ಲಿ 0.4, ತೆಲಂಗಾಣ 0.5, ಜಾರ್ಖಂಡ್ ಮತ್ತು ಛತ್ತೀಸ್ ಗಢದಲ್ಲಿ 0.9 ರಷ್ಟಿದೆ. ಆದರೆ, ಮಹಾರಾಷ್ಟ್ರ, ಗುಜರಾತ್ ಮತ್ತು ಪಂಜಾಬ್ ಸಾವಿನ ಸಂಖ್ಯೆ ಹೆಚ್ಚಿದೆ. ಪುಣೆಯ ರಾಷ್ಟ್ರೀಯ ಜೀವಕೋಶ ವಿಜ್ಞಾನ ಕೇಂದ್ರ ಮತ್ತು ಚೆನ್ನೈನ ಗಣಿತಶಾಸ್ತ್ರ ಸಂಸ್ಥೆ ಸಿಎಸ್ಐಆರ್ ನಿಂದ ಈ ಪತ್ರಿಕೆ ಪ್ರಕಟಗೊಂಡಿದೆ.

100 ರಾಷ್ಟ್ರಗಳಲ್ಲಿ ಪ್ರತಿ ಮಿಲಿಯನ್ ಗೆ ಕೋವಿಡ್ -19 ಸಾವುಗಳು ಮತ್ತು ನೀರು, ನೈರ್ಮಲ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಅಂಶಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಕಳಪೆ ನೈರ್ಮಲ್ಯವಿದ್ದರೂ ಪ್ರತಿ ಮಿಲಿಯನ್ ಗೆ ಕಡಿಮೆ ಸಾವಿನ ಪ್ರಕರಣಗಳನ್ನು ಗುರುತಿಸಿದ್ದಾರೆ. ವಿರೋಧಾಭಾಸವೆಂದರೆ, ಉತ್ತಮ ನೈರ್ಮಲ್ಯವು  ಪ್ರತಿ ಮಿಲಿಯನ್ ಗೆ ಹೆಚ್ಚಿನ ಸಂಖ್ಯೆಯ ಸಾವಿಗೆ ಕಾರಣವಾಗಿದೆ. 

ಕಳಪೆ ನೈರ್ಮಲ್ಯದ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇರುವುದನ್ನು ಗುರುತಿಸಿದ್ದೇವೆ. ರೋಗ ನಿರೋಧಕ ಶಕ್ತಿ ವ್ಯವಸ್ಥೆಯಿಂದ ಹೀಗಾಗುತ್ತಿರಬಹುದು ಆದರೂ, ಈಗಲೂ ಕೂಡಾ ಅರ್ಥವಾಗುತ್ತಿಲ್ಲ ಎಂದು ಕಾಂಗ್ರಾದ ರಾಜೇಂದ್ರ ಪ್ರಸಾದ್  ಸರ್ಕಾರಿ ವೈದ್ಯಕೀಯ ಕಾಲೇಜಿನ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. 

ಕೋವಿಡ್ -19 ರ ಕಾರಣದಿಂದಾಗಿ ತರಬೇತಿ ಪಡೆದ ರೋಗನಿರೋಧಕ ಶಕ್ತಿ, ನೈರ್ಮಲ್ಯ ಕಲ್ಪನೆ ಮತ್ತು ಕಡಿಮೆ ಸಾವಿನ ಪ್ರಮಾಣಗಳ ನಡುವಿನ ಸಂಬಂಧವನ್ನು ದೃಢೀಕರಿಸಲು ಸಾಧ್ಯವಿಲ್ಲ. ಆದರೆ,  ಅದು ಸಾಧ್ಯವಿರಬಹುದು ಎಂದು ಹಿರಿಯ ಜೀವಶಾಸ್ತ್ರಜ್ಞ ಮತ್ತು ಜಾಮಿಯಾ ಹ್ಯಾಮ್‌ಡಾರ್ಡ್ ಉಪಕುಲಪತಿ ಸಯೀದ್ ಹಸ್ನೈನ್ ಹೇಳಿದರು. 

ಬಿಸಿಜಿ ಲಸಿಕೆಯೊಂದಿಗೆ  ಸಾರ್ಸ್ ಕೋವ್-2  ನಂತಹ ಹೊಸ ವೈರಸ್‌ಗೆ ನಮ್ಮ ದೇಹಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದಕ್ಕೆ ಬಲವಾದ ಪರಸ್ಪರ ಸಂಬಂಧವಿದೆ ಎಂದು ಅವರು ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp