ಲೊನಾವಾಲ: ಗುಂಡಿಕ್ಕಿ ಶಿವಸೇನಾ ಮುಖಂಡನ ಹತ್ಯೆ 

 ಮಹಾರಾಷ್ಟ್ರದ ಲೊನಾವಾಲದಲ್ಲಿ ಶಿವಸೇನೆಯ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯ ಪುತ್ರ ರಾಹುಲ್ ಶೆಟ್ಟಿಯನ್ನು ಇಂದು ಬೆಳಗ್ಗೆ 9-30ರ ಸುಮಾರಿನಲ್ಲಿ ಗುಂಡಿಟ್ಟು ಹತ್ಯೆ ಗೈಯಲಾಗಿದೆ.

Published: 26th October 2020 03:50 PM  |   Last Updated: 26th October 2020 03:50 PM   |  A+A-


Rahul_Shetty1

ರಾಹುಲ್ ಶೆಟ್ಟಿ

Posted By : Nagaraja AB
Source : Online Desk

ಲೊನಾವಾಲ: ಮಹಾರಾಷ್ಟ್ರದ ಲೊನಾವಾಲದಲ್ಲಿ ಶಿವಸೇನೆಯ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯ ಪುತ್ರ ರಾಹುಲ್ ಶೆಟ್ಟಿಯನ್ನು ಇಂದು ಬೆಳಗ್ಗೆ 9-30ರ ಸುಮಾರಿನಲ್ಲಿ ಗುಂಡಿಟ್ಟು ಹತ್ಯೆ ಗೈಯಲಾಗಿದೆ.

43 ವರ್ಷದ ಶಿವಸೇನಾ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷನಾಗಿದ್ದ ರಾಹುಲ್ ಶೆಟ್ಟಿಯ ಮನೆ ಮಂದೆ ಆತನ ಕುತ್ತಿಗೆಗೆ ಇರಿದು ಮೂರು ಬಾರಿ ಗುಂಡು ಹಾರಿಸಲಾಗಿದೆ.  ಕೂಡಲೇ ರಾಹುಲ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮನೆ ಮುಂದಿನ ಅಂಗಡಿಯೊಂದರ ಬಳಿ ರಾಹುಲ್ ಟೀ ಕುಡಿಯುತ್ತಿದ್ದಾಗ ದಾಳಿ ಮಾಡಲಾಗಿದೆ. ಆತನ ತಲೆ ಹಾಗೂ ಎದೆಗೆ ಮೂರು ಗುಂಡುಗಳನ್ನು ದುಷ್ಕರ್ಮಿಗಳು ಹಾರಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರು ಹತ್ಯೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದು, ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಘಟನೆ  ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp