ಚಿನ್ನ ಕಳ್ಳಸಾಗಣೆ ಆರೋಪ: ಆಸ್ಪತ್ರೆಯಿಂದಲೇ ಶಿವಶಂಕರ್ ವಶಕ್ಕೆ ಪಡೆದುಕೊಂಡ ಇಡಿ ಅಧಿಕಾರಿಗಳು

ಕೇರಳ ಹೈಕೋರ್ಟ್ ನಲ್ಲಿ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳ ಸಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರನ್ ಅವರನ್ನು ಇಡಿ ಅಧಿಕಾರಿಗಳು ಆಸ್ಪತ್ರೆಯಿಂದಲೇ ವಶಕ್ಕೆ ತೆಗೆದುಕೊಂಡಿದ್ದಾರೆ.
ಎಂ ಶಿವಶಂಕರ್
ಎಂ ಶಿವಶಂಕರ್

ತಿರುವನಂತಪುರ: ಕೇರಳ ಹೈಕೋರ್ಟ್ ನಲ್ಲಿ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳ ಸಿಎಂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರನ್ ಅವರನ್ನು ಇಡಿ ಅಧಿಕಾರಿಗಳು ಆಸ್ಪತ್ರೆಯಿಂದಲೇ ವಶಕ್ಕೆ ತೆಗೆದುಕೊಂಡಿದ್ದಾರೆ.

ಅವರನ್ನು ಕೊಚ್ಚಿಯಲ್ಲಿರುವ ಇಡಿ ಕಚೇರಿಗೆ ಕೊಂಡೊಯ್ಯಲಾಗುವುದು ಮತ್ತು ಸಂಜೆಯೊಳಗೆ ಕೇಸ್ ದಾಖಲಿಸುವ ಸಾಧ್ಯತೆಯಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಶಿವಶಂಕರ್ ಅವರ ಪಾತ್ರವಿದೆ ಎಂದು ಆರೋಪಿಸಿದ್ದ ಇಡಿ ಅಧಿಕಾರಿಗಳು ಜಾಮೀನು ನೀಡಲು ಅಡ್ಡಿ ಪಡಿಸಿದ್ದರು.

ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್‍ ಮೂಲಕ ಚಿನ್ನಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್‍ನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ಅವರ ಕಾರ್ಯದರ್ಶಿ ಎಂ ಶಿವಶಂಕರ್‍ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. 

ಅಕ್ಟೋಬರ್ 16 ರಂದು ಶಿವಶಂಕರ್ ಅವರ ಮನೆಯಿಂದ ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು, ನಂತರ ಎದೆ ನೋವಿನ ಕಾರಣ ಹೇಳಿ ಶಿವಶಂಕರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆಯಿಲ್ಲದ ಕಾರಣ ಅವರನ್ನು ಮೆಡಿಕಲ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಹಾಗೂ ಅಕ್ಟೋಬರ್ 19 ರಂದು ಅವರು ಜಾಮೀನು ಪಡೆಯುವ ಮೂಲಕ ಬಂಧನವನ್ನು ತಪ್ಪಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com