'ನಾವೇಕೆ ಕ್ಷಮೆ ಕೇಳಬೇಕು, ಬಿಜೆಪಿ ನಾಯಕರ ಆರೋಪ ನನಗೆ ಅರ್ಥವೇ ಆಗುತ್ತಿಲ್ಲ: ಪುಲ್ವಾಮಾ ದಾಳಿ ಬಗ್ಗೆ ಶಶಿ ತರೂರ್

ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿರುವುದನ್ನು ಸಂಸದ ಶಶಿ ತರೂರು ಪ್ರಶ್ನೆ ಮಾಡಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿರುವುದನ್ನು ಸಂಸದ ಶಶಿ ತರೂರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಯಾವ ಕಾರಣಕ್ಕಾಗಿ ಕ್ಷಮೆ ಕೇಳಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ನನಗೆ ಇನ್ನೂ ಅರ್ಥವಾಗುತ್ತಿಲ್ಲ ಕಾಂಗ್ರೆಸ್ ಏಕೆ ಕ್ಷಮೆ ಕೇಳಬೇಕೆಂದು, ನಮ್ಮ ಸೈನಿಕರನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕೆಂದು ಸರ್ಕಾರದಿಂದ ನಿರೀಕ್ಷೆ ಮಾಡಿದ್ದಕ್ಕೆಯೇ, ರಾಷ್ಟ್ರಮಟ್ಟದ ದುರಂತವನ್ನು ರಾಜಕೀಯ ಮಾಡುವ ಬದಲು ದೇಶವನ್ನು ಗೌರವಿಸಿದ್ದಕ್ಕೆಯೇ, ಹುತಾತ್ಮ ಯೋಧರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಕ್ಕೆಯೇ ಏಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಶಶಿ ತರೂರು ಪ್ರಶ್ನೆ ಮಾಡಿದ್ದಾರೆ.

ಪುಲ್ವಾಮಾ ದಾಳಿಗೆ ತಮ್ಮ ಸರ್ಕಾರವೇ ಕಾರಣ ಎಂದು ಪಾಕಿಸ್ತಾನದ ಸಚಿವರು ನೀಡಿದ್ದ ಹೇಳಿಕೆಯನ್ನು ನಿನ್ನೆ ಉಲ್ಲೇಖಿಸಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವದೇಕರ್, ಪಾಕಿಸ್ತಾನ ಪುಲ್ವಾಮಾ ದಾಳಿಗೆ ಕಾರಣ ಎಂಬುದನ್ನು ಈಗ ಒಪ್ಪಿಕೊಂಡಿದೆ. ಪಿತೂರಿ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಈಗ ದೇಶದ ಮುಂದೆ ಕ್ಷಮೆ ಕೇಳಬೇಕು ಎಂದು ಹೇಳಿ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ನೀಡಿದ್ದ ಹೇಳಿಕೆಯನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com