ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ; ಕೇಂದ್ರದ ವಿರುದ್ಧ ಚಿದಂಬರಂ ಕಿಡಿ

ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಭಾರತದ ಜಿಡಿಪಿ ಶೇ.-24ಕ್ಕೆ ತಲುಪಿದೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂಜರಿತಕ್ಕೆ ಕೊರೋನಾ ವೈರಸ್‌ ಕಾರಣ.
ಚಿದರಂಬರಂ
ಚಿದರಂಬರಂ

ನವ ದೆಹಲಿ: ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಭಾರತದ ಜಿಡಿಪಿ ಶೇ.-24ಕ್ಕೆ ತಲುಪಿದೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂಜರಿತಕ್ಕೆ ಕೊರೋನಾ ವೈರಸ್‌ ಕಾರಣ, "ಆಕ್ಟ್‌ ಆಫ್‌ ಗಾಡ್‌" ಅಂದರೆ ದೇವರು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ, "ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ" ಎಂದು ಚಿದಂಬರಂ ಕಿಡಿಕಾರಿದ್ದಾರೆ.

ದೇಶದ ಜಿಡಿಪಿ ಸರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಜಿಎಸ್‌ಟಿ ಸಭೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ತೆರಿಗೆಯ ಪಾಲನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ "ದೇಶದ ಆರ್ಥಿಕತೆ ಕುಸಿತಕ್ಕೆ ದೇವರೆ ಕಾರಣ" ಎಂಬ ರೀತಿಯ ಹೇಳಿಕೆ ನೀಡಿದ್ದರು. 

ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಿ. ಚಿದಂಬರಂ, "ವಾಸ್ತವವಾಗಿ, ನೀವು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ದೇವರು ದೇಶದ ರೈತರನ್ನು ಆಶೀರ್ವದಿಸಿದ್ದಾನೆ. ಸಾಂಕ್ರಾಮಿಕ ರೋಗವು ಒಂದು ನೈಸರ್ಗಿಕ ವಿಕೋಪ ನಿಜ. ಆದರೆ, ನೀವು ಈ ಸಾಂಕ್ರಾಮಿಕ ರೋಗದಂತಹ ನೈಸರ್ಗಿಕ ವಿಕೋಪವನ್ನೂ ಸಹ ಮಾನವ ನಿರ್ಮಿತ ವಿಪತ್ತಿನೊಂದಿಗೆ ಸಂಯೋಜಿಸುತ್ತಿದ್ದೀರಿ" ಎಂದು ದೂರಿದ್ದಾರೆ.

"2019-20ರ ಅಂತ್ಯದ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯು ಶೇ.20 ರಷ್ಟು ಕುಸಿದಿತ್ತು. ಆದರೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆು ಕ್ಷೇತ್ರ ಮಾತ್ರ ಶೇ.3.4 ರಷ್ಟು ಏರಿಕೆ ಕಂಡಿತ್ತು. ಆರ್ಥಿಕ ಕುಸಿತಕ್ಕೆ ದೇವರನ್ನು ದೂಷಿಸುವ ನಿರ್ಮಲಾ ಸೀತಾರಾಮನ್, ಕೃಷಿಕರು ಮತ್ತು ಅವರಿಗೆ ಕೃಪೆ ತೋರಿದ ದೇವರನ್ನು ಶ್ಲಾಘಿಸಬೇಕು" ಎಂದು ಚಿದಂಬರಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com