ಕಂಗನಾಗೆ ತಾತ್ಕಾಲಿಕ ಜಯ: ಶಿವಸೇನಾ ನೇತೃತ್ವದ ಬಿಎಂಸಿಯ ಒತ್ತವರಿ ತೆರವಿಗೆ ಬಾಂಬೆ ಹೈಕೋರ್ಟ್ ತಡೆ!

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಿಡಿದೆದಿದ್ದ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅಕ್ರಮ ಕಟ್ಟಡ ಎಂಬ ಆರೋಪದಡಿ ನಟಿಯ ಕಚೇರಿಯನ್ನು ನೆಲಸಮಗೊಳಿಸಿದ್ದು ಸದ್ಯ ಈ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. 
ಕಂಗನಾ ರಣಾವತ್
ಕಂಗನಾ ರಣಾವತ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಿಡಿದೆದಿದ್ದ ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅಕ್ರಮ ಕಟ್ಟಡ ಎಂಬ ಆರೋಪದಡಿ ನಟಿಯ ಕಚೇರಿಯನ್ನು ನೆಲಸಮಗೊಳಿಸಿದ್ದು ಸದ್ಯ ಈ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. 

ಅನುಮತಿ ಪಡೆಯದೇ ಕಟ್ಟಡದ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಬಿಎಂಸಿ ಕಂಗನಾ ರಣಾವತ್ ಅವರ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಆರಂಭಿಸಿತ್ತು. 

ಈ ಸಂಬಂಧ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ.

ಮುಂಬೈನ ಪಾಲಿ ಹಿಲ್ ನಲ್ಲಿನ ಕಂಗನಾರ ಕಚೇರಿ ಬಳಿ ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾಗಿರುವ ಕಟ್ಟಡವನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. 

ಈ ಘಟನೆಗೆ ತಕ್ಷಣವೇ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ನಟಿ ಕಂಗನಾ, ಮಹಾರಾಷ್ಟ್ರ ಸರ್ಕಾರ ನನ್ನನ್ನು ಗುರಿಯಾಗಿರಿಸಿಕೊಂಡು ಈ ರೀತಿ ಮಾಡುತ್ತಿದೆ. ಕಟ್ಟಡ ಬದಲಾವಣೆ ಸಮಯದಲ್ಲಿ ಕಾನೂನನ್ನು ಯಾವುದೇ ರೀತಿಯಲ್ಲಿಯೂ ಉಲ್ಲಂಘನೆ ಮಾಡಿಲ್ಲ, ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ,ಯಾಕೆ ನನ್ನ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com