ಕೋವಿಡ್-19:ವಿಶ್ವದಾದ್ಯಂತ 9 ಲಕ್ಷ ಗಡಿ ದಾಟಿದ ಮೃತರ ಸಂಖ್ಯೆ

ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 9 ಲಕ್ಷ ಗಡಿ ದಾಟಿದೆ ಎಂದು ಜ್ಹಾನ್ ಹಾಪ್ಕಿನ್ಸ್ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 9 ಲಕ್ಷ ಗಡಿ ದಾಟಿದೆ ಎಂದು ಜ್ಹಾನ್ ಹಾಪ್ಕಿನ್ಸ್ ವರದಿ ಮಾಡಿದೆ.

ವಿಶ್ವದಲ್ಲಿ ಪ್ರಸ್ತುತ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 9 ಲಕ್ಷದ 1 ಸಾವಿರದ 050 ಆಗಿದ್ದು, ಒಟ್ಟಾರೆ 27.7 ದಶಲಕ್ಷ ಪ್ರಕರಣಗಳು ಮತ್ತು 18.6 ಮಿಲಿಯನ್ ಗುಣಮುಖ ಹೊಂದಿದ ಕೇಸುಗಳಾಗಿವೆ.

ಅಮೆರಿಕದಲ್ಲಿ ಕೊರೋನಾ ಸೋಂಕಿತರು ಮತ್ತು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು 63.5 ಮಿಲಿಯನ್ ಕೇಸುಗಳಿವೆ. 43 ಮಿಲಿಯನ್ ಕೇಸುಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಸಿಂಗಾಪುರಕ್ಕೆ ಹೋಗುವ ಪ್ರಯಾಣಿಕರು ಪ್ರಯಾಣಕ್ಕೆ 72 ಗಂಟೆ ಮೊದಲು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಎಂದು ಬಂದ ಮೇಲಷ್ಟೇ ಹೋಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಬೇರೆ ಯಾವುದೇ ಬದಲಿ ಲಸಿಕೆಗಳು, ಔಷಧಿಗಳು ಇಲ್ಲದಿದ್ದಾಗ ಪ್ಲಾಸ್ಮಾ ಥೆರಪಿ ಕೊರೋನಾದಿಂದ ತೀವ್ರ ಅನಾರೋಗ್ಯದಲ್ಲಿರುವ ರೋಗಿಗಳನ್ನು ಬದುಕಿಸಲು ನೆರವಾಗುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ವಿರೋಧಿ ಆಂಟಿ ಬಯೊಟಿಕ್ ಗಳು ವ್ಯಕ್ತಿಯ ದೇಹದಲ್ಲಿ ಎಷ್ಟು ಸಮಯ ಇರುತ್ತದೆ ಎಂಬುದು ಇನ್ನೂ ಪ್ರಶ್ನಾರ್ಥಕವಾಗಿದೆ ಎಂದು ಮಾಜಿ ವಿಜ್ಞಾನಿ ಮತ್ತು ಐಸಿಎಂಆರ್ ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಡಾ ಲಲಿತ್ ಕಾಂತ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com