ಅ.4ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ- ಯುಪಿಎಸ್ ಸಿ

ಅಕ್ಟೋಬರ್ 4ರಂದು ನಡೆಯಲಿರುವ ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸಿವುದು ಕಡ್ಡಾಯವಾಗಿದೆ ಎಂದು ಯುಪಿಎಸ್ ಸಿ ತಿಳಿಸಿದೆ.ಅಭ್ಯರ್ಥಿಗಳು ತಾವೇ ಸ್ವತ: ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್  ತರಬೇಕು ಎಂದು ಯುಪಿಎಸ್ ಸಿ ಹೇಳಿದೆ.

Published: 10th September 2020 03:38 PM  |   Last Updated: 10th September 2020 03:38 PM   |  A+A-


UPSC1

ಯುಪಿಎಸ್ ಸಿ

Posted By : Nagaraja AB
Source : PTI

ನವದೆಹಲಿ: ಅಕ್ಟೋಬರ್ 4ರಂದು ನಡೆಯಲಿರುವ ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸಿವುದು ಕಡ್ಡಾಯವಾಗಿದೆ ಎಂದು ಯುಪಿಎಸ್ ಸಿ ತಿಳಿಸಿದೆ.ಅಭ್ಯರ್ಥಿಗಳು ತಾವೇ ಸ್ವತ: ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್  ತರಬೇಕು ಎಂದು ಯುಪಿಎಸ್ ಸಿ ಹೇಳಿದೆ.

ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತಿತರ ಹುದ್ದೆಗಳ ಆಯ್ಕೆಗಾಗಿ ವಾರ್ಷಿಕವಾಗಿ ಮೂರು ಹಂತಗಳಲ್ಲಿ ಅಂದರೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.

ಮಾಸ್ಕ್ ಧರಿಸದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ಯುಪಿಎಸ್ ಸಿ, ಪರೀಕ್ಷಾ ಕೇಂದ್ರದ ಆವರಣ ಹಾಗೂ ಕೊಠಡಿಯೊಳಗೆ ಅಭ್ಯರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ನಿಯಮ ಪಾಲಿಸಬೇಕು ಎಂದು ತಿಳಿಸಿದೆ.

ಈ ವರ್ಷ ಮೇ 31 ರಂದು ನಾಗರಿಕ ಸೇವಾ ಪೂರ್ವ ಭಾವಿ ಪರೀಕ್ಷೆ ನಡೆಯಬೇಕಿತ್ತು, ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರಿಂದ ಅದನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.

ಆಯೋಗದ ವೆಬ್ ಸೈಟ್ (http://upsconline.nic.in)ನಲ್ಲಿ ಅಭ್ಯರ್ಥಿಗಳು ಇ- ಪ್ರವೇಶಾತಿ ಪತ್ರಗಳನ್ನು ಪಡೆಯಬಹುದು ಎಂದು  ಯುಪಿಎಸ್ ಸಿ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp