ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿ ಚೀನಾ ಸೇನೆ

ಚೀನಾ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಕುಗ್ರಾಮವೊಂದರ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿಮ್ಲಾ: ಚೀನಾ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಕುಗ್ರಾಮವೊಂದರ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಚೀನಾದ ಪ್ರಾಂತ್ಯದಲ್ಲಿ ಇಂದು ವಶಪಡಿಸಿಕೊಂಡಿದ್ದ ಐವರು ಭಾರತೀಯರನ್ನು ಚೀನಾದ ಸೇನೆ ಹಸ್ತಾಂತರಿಸಿದೆ. ಕಳೆದ ಸೆಪ್ಟೆಂಬರ್ 1ರಂದು ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಐವರು ಬೇಟೆಗಾರರಾಗಿದ್ದರು ಎಂದು ಭಾರತೀಯ ಸೇನೆ ಹೇಳಿದೆ. ಈ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಖಚಿತಪಡಿಸಿದ್ದರು.

ಆದರೆ ಸ್ಥಳೀಯರು ಮತ್ತು ಅವರ ಕುಟುಂಬಸ್ಥರು ಹೇಳುವ ಪ್ರಕಾರ ಐವರು ಕೂಲಿಯಾಳುಗಳು. ಬೇಟೆಯಾಡಲು ಹೋಗಿ ಗಡಿ ವಾಸ್ತವ ರೇಖೆನ್ನು ದಾಟಿ ಸುಬನ್ಸಿರಿ ಎಂಬಲ್ಲಿ ಚೀನಾದ ಪ್ರಾಂತ್ಯದೊಳಗೆ ನುಗ್ಗಿದ್ದರು ಎಂಬ ಆರೋಪದ ಮಲೆ ಅವರನ್ನು ಚೀನಾದ ಸೇನೆ ಬಂಧಿಸಿ ಇರಿಸಿಕೊಂಡಿತ್ತು. ಐವರು ತಮ್ಮ ಬಳಿ ಇರುವುದಾಗಿ ಸೆಪ್ಟೆಂಬರ್ 8ರಂದು ಹೇಳಿಕೊಂಡಿತ್ತು.

ನಂತರ ಐವರನ್ನು ವಾಪಸ್ ಪಡೆಯಲು ಭಾರತೀಯ ಸೇನೆ ಸತತ ಪ್ರಯತ್ನಪಟ್ಟಿತ್ತು. ಭಾರತೀಯ ಸೇನೆ, ಇಂಡೊ-ಟಿಬೆಟ್ ಗಡಿ ಭದ್ರತಾ ಪೊಲೀಸರು, ಸ್ಥಳೀಯರು, ಕೂಲಿಯಾಳುಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಗಳ ನೆರವಿನಿಂದ, ಲಾಂಗ್ ರೇಂಜ್ ಕಾವಲುಪಡೆಯಿಂದ ಭಾರತ ಮತ್ತು ಚೀನಾ ಗಡಿಯ ಮೆಕ್ ಮಹೊನ್ ಗಡಿಯ ಮೂಲಕ ಇಂದು ಹಸ್ತಾಂತರ ಮಾಡಲಾಯಿತು.

ಅರುಣಾಚಲ ಪ್ರದೇಶದ ಹಳ್ಳಿಗಳಲ್ಲಿ ಅರಣ್ಯ ಪ್ರದೇಶಗಳೊಳಗೆ ಇಲ್ಲಿನ ಸ್ಥಳೀಯರು ಗಿಡಮೂಲಿಕೆಗಳು ಮತ್ತು ಜಿಂಕೆಗಳ ಬೇಟೆಗಾಗಿ ಕಾಡಿಗೆ ಹೋಗುತ್ತಾರೆ. ಜಿಂಕೆ ಚರ್ಮ ಮತ್ತು ಗಿಡಮೂಲಿಕೆಗಳಿಗೆ ಅಂತಾರಾಷ್ಟ್ರೀಯ ಬೂದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ಭಾರತ ಮತ್ತು ಚೀನಾ ಪೂರ್ವ ಲಡಾಕ್ ನಲ್ಲಿ ಗಡಿ ಸಂಘರ್ಷ ಹೊಂದಿದ್ದು ಗಲ್ವಾನ್ ಕಣಿವೆಯಿಂದ ಸೇನಾಪಡೆ ನಿಯೋಜನೆ ಹಿಂಪಡೆಯಲು ಮಾತುಕತೆಗಳು ನಡೆಯುತ್ತಲೇ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com