ಕೋವಿಡ್-19 ಲಸಿಕೆ ಪ್ರಯೋಗಕ್ಕೆ ನೇಮಕಾತಿ ರದ್ದುಪಡಿಸುವಂತೆ ಸೆರಂ ಇನ್ಸ್ ಟಿಟ್ಯೂಗೆ ಡಿಸಿಜಿಐ ಆದೇಶ

ಅಸ್ಟ್ರಾಝೆನಕಾ ಫಾರ್ಮಾ ಕಂಪೆನಿ ಕೋವಿಡ್-19 ಲಸಿಕೆಯ ಪ್ರಯೋಗವನ್ನು ಬೇರೆ ದೇಶಗಳಲ್ಲಿ ನಿಲ್ಲಿಸಿರುವುದರಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜೊತೆ ಕೋವಿಡ್-19ನ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಆದೇಶ ನೀಡಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಸ್ಟ್ರಾಝೆನಕಾ ಫಾರ್ಮಾ ಕಂಪೆನಿ ಕೋವಿಡ್-19 ಲಸಿಕೆಯ ಪ್ರಯೋಗವನ್ನು ಬೇರೆ ದೇಶಗಳಲ್ಲಿ ನಿಲ್ಲಿಸಿರುವುದರಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜೊತೆ ಕೋವಿಡ್-19ನ ಎರಡು ಮತ್ತು ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಆದೇಶ ನೀಡಿದೆ.

ಆದೇಶದ ಪ್ರತಿ ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿದ್ದು, ಅದರಲ್ಲಿ ಡಿಸಿಜಿಐನ ಡಾ ವಿ ಜಿ ಸೊಮನಿ ಸೇರಂ ಇನ್ಸ್ ಟಿಟ್ಯೂಟ್ ಗೆ ಆದೇಶ ನೀಡಿ ಪ್ರಯೋಗದ ಭಾಗವಾಗಿ ಈಗಾಗಲೇ ಪ್ರಯೋಗ ನಡೆಸಿರುವ ಲಸಿಕೆಯ ಸುರಕ್ಷತೆ ಬಗ್ಗೆ ನಿಗಾವಹಿಸುವಂತೆ, ಮತ್ತು ಕಂಪೆನಿ ಏನೇನು ಯೋಜನೆ ಹಾಕಿಕೊಂಡಿದೆ ಎಂಬುದನ್ನು ತಿಳಿಸುವಂತೆ ವರದಿ ಸಲ್ಲಿಸಬೇಕೆಂದು ಹೇಳಿದೆ.

ಪ್ರಯೋಗದಲ್ಲಿ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ ನೇಮಕಾತಿಗೆ ಮುನ್ನ ಡಿಸಿಜಿಐಯಿಂದ ಅನುಮತಿ ಪಡೆಯಲು ಮತ್ತು ಇಂಗ್ಲೆಂಡಿನ ದತ್ತಾಂಶ ಮತ್ತು ಸುರಕ್ಷತೆ ನಿರ್ವಹಣೆ ಮಂಡಳಿಯಿಂದ ಅನುಮೋದನೆ ಪಡೆದಿರುವ ಬಗ್ಗೆ ಅನುಮತಿ ಸಲ್ಲಿಸುವಂತೆ ಕೂಡ ಸೊಮನಿ ಆದೇಶ ನೀಡಿದ್ದಾರೆ.

ಕೇಂದ್ರ ಡ್ರಗ್ ನಿಯಂತ್ರಣ ಪ್ರಾಧಿಕಾರ ಕಳೆದ ಸೆಪ್ಟೆಂಬರ್ 9ರಂದು ಸೆರಂ ಇನ್ಸ್ ಟಿಟ್ಯೂಟ್ ಗೆ ಶೋಕಾಸ್ ನೊಟೀಸ್ ನೀಡಿ, ಅಸ್ಟ್ರಾಝೆನಕಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಸೆರಂ ಇನ್ಸ್ ಟಿಟ್ಯೂಟ್ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿತ್ತು.

ಬ್ರಿಟನ್-ಸ್ವೀಡನ್ ಮೂಲದ ಬಯೊ ಫಾರ್ಮಕ್ಯುಟಿಕಲ್ ಕಂಪೆನಿ ಅಸ್ಟ್ರಾಝೆನಕಾ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜೊತೆ ಸೇರಿಕೊಂಡು ಲಸಿಕೆ ಅಭಿವೃದ್ಧಿಪಡಿಸುತ್ತಿತ್ತು. ಅವುಗಳ ಜೊತೆ ಪುಣೆ ಮೂಲದ ಸೆರಂ ಇನ್ಸ್ ಟಿಟ್ಯೂಟ್ ಸಹಭಾಗಿತ್ವ ಹೊಂದಿದೆ. ಶೋಕಾಸ್ ನೊಟೀಸ್ ಬಂದ ನಂತರ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸುವುದಾಗಿ ಕಂಪೆನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com