ಗಡಿ ಪ್ರದೇಶದಲ್ಲಿ ಚಟುವಟಿಕೆಗಳನ್ನು ನಡೆಸಲು ಐಎಎಫ್ ನಿಂದ ಭೂಮಿ ಹುಡುಕಾಟ
ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಜೊತೆಗಿನ ಭೂ ವಿವಾದ ನಡೆಯುತ್ತಿರುವಂತೆಯೇ, ಗಡಿ ಪ್ರದೇಶದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ಭೂಮಿ ಹುಡುಕಾಟ ನಡೆಸುತ್ತಿರುವ ಕೇಂದ್ರೀಯ ಏರ್ ಕಮಾಂಡ್ ಚೀಫ್ , ಏರ್ ಮಾರ್ಷಲ್ ರಾಜೀಶ್ ಕುಮಾರ್, ಉತ್ತರ್ ಖಂಡ್ ಮುಖ್ಯಮಂತ್ರಿ ತ್ರೀವೆಂದರ್ ಸಿಂಗ್ ರವಾತ್ ಅವರನ್ನು ಇಂದು ಭೇಟಿ ಮಾಡಿದ್ದಾರೆ.
Published: 12th September 2020 05:55 PM | Last Updated: 12th September 2020 05:55 PM | A+A A-

ಸಾಂದರ್ಭಿಕ ಚಿತ್ರ
ಉತ್ತರ್ ಖಂಡ್: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಜೊತೆಗಿನ ಭೂ ವಿವಾದ ನಡೆಯುತ್ತಿರುವಂತೆಯೇ, ಗಡಿ ಪ್ರದೇಶದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ಭೂಮಿ ಹುಡುಕಾಟ ನಡೆಸುತ್ತಿರುವ ಕೇಂದ್ರೀಯ ಏರ್ ಕಮಾಂಡ್ ಚೀಫ್ , ಏರ್ ಮಾರ್ಷಲ್ ರಾಜೀಶ್ ಕುಮಾರ್, ಉತ್ತರ್ ಖಂಡ್ ಮುಖ್ಯಮಂತ್ರಿ ತ್ರೀವೆಂದರ್ ಸಿಂಗ್ ರವಾತ್ ಅವರನ್ನು ಇಂದು ಭೇಟಿ ಮಾಡಿದ್ದಾರೆ.
ಮಹತ್ವದ ಕಾರ್ಯತಂತ್ರದ ಕಾರಣ ಗುಡ್ಡಗಾಡು ಪ್ರದೇಶಗಳಲ್ಲಿ ವಾಯು ರಕ್ಷಣಾ ರಾಡಾರ್ ಮತ್ತು ಮುಂಗಡ ಲ್ಯಾಂಡಿಂಗ್ ಮೈದಾನವನ್ನು ಸ್ಥಾಪಿಸಲು ಭೂಮಿಯ ಲಭ್ಯತೆಯ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಕೇಂದ್ರೀಯ ಏರ್ ಕಮಾಂಡ್ ಚೀಫ್ ಚರ್ಚಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಚೀನಾ ಮತ್ತು ನೇಪಾಳದೊಂದಿಗೆ ಉತ್ತರ್ ಖಂಡ್ ರಾಜ್ಯದ ಗಡಿ ಪ್ರದೇಶಗಳು ಹಂಚಿಕೆಯಾಗಿವೆ.ಉತ್ತರಾಖಂಡದ ಗುಡ್ಡಗಾಡು ಜಿಲ್ಲೆಗಳಾದ ಚಮೋಲಿ, ಪಿಟ್ಗೊರಘಡ ಮತ್ತು ಉತ್ತರ ಕಾಶಿಗಳಲ್ಲಿ ವಾಯು ರಕ್ಷಣಾ ರಾಡಾರ್ ಮತ್ತು ಮುಂಗಡ ಲ್ಯಾಂಡಿಂಗ್ ಮೈದಾನವನ್ನು ಸ್ಥಾಪಿಸುವುದರಿಂದ ವಾಯುಪಡೆಗೆ ಹೆಚ್ಚಿನ ಸಹಾಯವಾಗಲಿದೆ ಎಂದು ಏರ್ ಕಮಾಂಡ್ ಚೀಫ್ ಹೇಳಿದ್ದಾರೆ.
ಚೌಖುಟಿಯಾದ ವಿಮಾನ ನಿಲ್ದಾಣಕ್ಕೆ ಏರ್ ಮಾರ್ಷಲ್ ಭೂಮಿ ಹಂಚಿಕೆ ಕೋರಿರುವುದಲ್ಲದೇ, ಪಂತ್ ನಗರ, ಜಾಲಿ ಗ್ರಾಂಟ್ ಮತ್ತು ಪಿಟ್ಗೊರ ಘಡದ ವಿಮಾನ ನಿಲ್ದಾಣಗಳನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.