ತಮಿಳು ನಾಡಿನಲ್ಲಿ ನೀಟ್ ಆಕಾಂಕ್ಷಿಗಳ ಸರಣಿ ಆತ್ಮಹತ್ಯೆ:ಮತ್ತಿಬ್ಬರು ಸಾವಿಗೆ ಶರಣು, ಒಂದೇ ದಿನ ಮೂವರು!

ನೀಟ್ ಪರೀಕ್ಷೆ ಆಕಾಂಕ್ಷಿಗಳ ಆತ್ಮಹತ್ಯೆ ಸರಣಿ ತಮಿಳು ನಾಡಿನಲ್ಲಿ ಮುಂದುವರಿದಿದೆ. ಧರ್ಮಪುರಿ ಜಿಲ್ಲೆಯ ಇಲಕ್ಕಿ ಯಂಪಟ್ಟಿ ಎಂಬಲ್ಲಿ 20 ವರ್ಷದ ನೀಟ್ ಆಕಾಂಕ್ಷಿ ಪರೀಕ್ಷೆಗೆ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಆದಿತ್ಯ ಮನೆ ಬಳಿ ಪೊಲೀಸರು ಮತ್ತು ಬಲ ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ವಿದ್ಯಾರ್ಥಿ ಮೋತಿಲಾಲ್ (ಸಂಗ್ರಹ ಚಿತ್ರ)
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಆದಿತ್ಯ ಮನೆ ಬಳಿ ಪೊಲೀಸರು ಮತ್ತು ಬಲ ಚಿತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ವಿದ್ಯಾರ್ಥಿ ಮೋತಿಲಾಲ್ (ಸಂಗ್ರಹ ಚಿತ್ರ)

ಧರ್ಮಪುರಿ: ನೀಟ್ ಪರೀಕ್ಷೆ ಆಕಾಂಕ್ಷಿಗಳ ಆತ್ಮಹತ್ಯೆ ಸರಣಿ ತಮಿಳು ನಾಡಿನಲ್ಲಿ ಮುಂದುವರಿದಿದೆ. ಧರ್ಮಪುರಿ ಜಿಲ್ಲೆಯ ಇಲಕ್ಕಿ ಯಂಪಟ್ಟಿ ಎಂಬಲ್ಲಿ 20 ವರ್ಷದ ನೀಟ್ ಆಕಾಂಕ್ಷಿ ಪರೀಕ್ಷೆಗೆ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ವಿದ್ಯಾರ್ಥಿಯನ್ನು 20 ವರ್ಷದ ಎಂ ಆದಿತ್ಯ ಎಂದು ಗುರುತಿಸಲಾಗಿದೆ. ಈತ ಇಲಂಕಿಯಂಪಟ್ಟಿಯ ಸೇವಾತಕವುಂದಾರ್ ರಸ್ತೆ ಬಳಿಯವರಾಗಿದ್ದಾರೆ. ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಎರಡನೇ ನೀಟ್ ಪರೀಕ್ಷೆಗೆ ಪ್ರವೇಶ ಪಡೆಯಲು ತಯಾರಿ ನಡೆಸುತ್ತಿದ್ದ. ಸೇಲಂ ಪರೀಕ್ಷಾ ಕೇಂದ್ರದಲ್ಲಿ ಇಂದು ಆತ ಪರೀಕ್ಷೆಗೆ ಹಾಜರಾಗಬೇಕಿತ್ತು.

ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಧರ್ಮಪುರಿ ಜಿಲ್ಲಾಧಿಕಾರಿ ಎಸ್ ಮಲರ್ವಿಝ್ಶಿ ತಿಳಿಸಿದ್ದಾರೆ. ಆದರೆ ಘಟನೆ ಬಗ್ಗೆ ಸಮಗ್ರ ತನಿಖೆ ಮಾಡಿದ ಮೇಲಷ್ಟೇ ಖಚಿತಪಡಿಸಲಾಗುವುದು ಎಂದು ಹೇಳಿದ್ದಾರೆ.
ತಂದೆ-ತಾಯಿಗಳು ವೈಯಕ್ತಿಕ ಕೆಲಸಕ್ಕೆಂದು ಮನೆಯಿಂದ ಹೊರಹೋಗಿದ್ದಾಗ ಯಾರೂ ಇಲ್ಲದ ಸಂದರ್ಭದಲ್ಲಿ ಆದಿತ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೀಟ್ ಪರೀಕ್ಷೆ ಭಯದಿಂದ ತಮಿಳು ನಾಡಿನಲ್ಲಿ 21 ವರ್ಷದ ಮತ್ತೊಬ್ಬ ವಿದ್ಯಾರ್ಥಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು ಒಂದೇ ದಿನದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೇರಿದೆ. ನಮಕ್ಕಲ್ ಜಿಲ್ಲೆಯ ತಿರುಚೆಂಗೊಡೆ ಎಂಬಲ್ಲಿ ವೈದ್ಯಕೀಯ ಪದವಿ ಆಕಾಂಕ್ಷಿ 21 ವರ್ಷದ ಮೋತಿಲಾಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತನಿಗೆ ಇಂದು ಕುಮಾರಪಾಲಯಂನ ಖಾಸಗಿ ಕಾಲೇಜೊಂದರಲ್ಲಿ ಪರೀಕ್ಷಾ ಕೇಂದ್ರವಿತ್ತು. ಈ ಹಿಂದೆ 2 ಬಾರಿ ನೀಟ್ ಪರೀಕ್ಷೆ ಬರೆದು ವಿಫಲನಾಗಿದ್ದ. ತನ್ನ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪೋಷಕರು ಎಷ್ಟು ಬಾರಿ ಕರೆದರೂ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು.

ಕೂಡಲೇ ಸ್ಥಳಕ್ಕೆ ಪೊಲೀಸರು ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನೀಟ್ ಪರೀಕ್ಷೆ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ಎಂದು ಮಾಹಿತಿ ಸಂಗ್ರಹಿಸಬೇಕಿದೆ.ಪೊಲೀಸರ ತನಿಖೆಯಿಂದ ಇಂದು ತಿಳಿದುಬರಲಿದೆ ಎಂದು ನಮಕ್ಕಲ್ ಜಿಲ್ಲಾಧಿಕಾರಿ ಕೆ ಮೆಗ್ರಾಜ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com