ಕೊರೋನಾ ಜೊತೆಗೆ ರಾಜಕೀಯ ಬಿರುಗಾಳಿಗಳನ್ನು ಎದುರಿಸುತ್ತೇವೆ: ಉದ್ಧವ್ ಠಾಕ್ರೆ

ರಾಜಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಷಯಗಳೆರಡನ್ನೂ ಸಮತೋಲಿತವಾಗಿ ಪರಿಹರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ರಾಜಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಷಯಗಳೆರಡನ್ನೂ ಸಮತೋಲಿತವಾಗಿ ಪರಿಹರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.

‘ಎಂತಹುದೇ ರಾಜಕೀಯ ಬಿರುಗಾಳಿಗಳು ಎದುರಾದರೂ ಎದುರಿಸುತ್ತೇನೆ. ಹಾಗೆಯೇ ಕೊರೋನಾವೈರಸ್‍ ವಿರುದ್ಧವೂ ಹೋರಾಡುತ್ತೇನೆ ಎಂದು ಠಾಕ್ರೆ ಭಾನುವಾರ ಟಿವಿ ವಾಹಿನಿ ಮೂಲಕ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ.

‘ಕಳೆದ ಹಲವು ದಿನಗಳಿಂದ ಕೊರೋನಾವೈರಸ್‍ ತಡೆಗೆ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಇದರ ಮಧ್ಯೆ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದೇವೆ. ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು 10 ಲಕ್ಷ ದಾಟಿದ ಒಂದು ದಿನದ ನಂತರ, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ತಮ್ಮ ಸರ್ಕಾರ ಪರಿಣಾಮಕಾರಿ ಕೆಲಸ ಮಾಡಿದೆ ಎಂದು ಠಾಕ್ರೆ ಹೇಳಿದರು.

ಮುಂಬೈನಲ್ಲಿ ನಟಿ ಕಂಗನಾ ರನೌತ್ ಅವರ ಬಂಗಲೆ ಉರುಳಿಸುವಿಕೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಅವರ ಸರ್ಕಾರ ನಿಭಾಯಿಸಿದ ರೀತಿ ಕುರಿತು ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಠಾಕ್ರೆ, ರಾಜಕೀಯ ಬಿಕ್ಕಟ್ಟಿನ ವಿರುದ್ಧವೂ ಹೋರಾಡುವುದಾಗಿ ಜನರಿಗೆ ಭರವಸೆ ನೀಡಿದರು.

"ಉನ್ನತ ರಾಜಕೀಯಕ್ಕೆ ಪ್ರತಿಕ್ರಿಯಿಸಲು ನಾನು ಮುಖ್ಯಮಂತ್ರಿಯ ಮುಖವಾಡವನ್ನು ತೆಗೆದುಹಾಕಬೇಕಾಗಿದೆ. ನಾನು ಮಾತನಾಡುವುದಿಲ್ಲ ಎಂದರೆ ನನ್ನ ಬಳಿ ಉತ್ತರಗಳಿಲ್ಲ  ಎಂದರ್ಥವಲ್ಲ ಎಂದು ಠಾಕ್ರೆ ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ರಾಜ್ಯ ಸರ್ಕಾರದ "ಮಿಷನ್ ಬಿಗಿನ್ ಎಗೇನ್" ಅಭಿಯಾನದ ಕುರಿತು ಮಾತನಾಡಿದ ಠಾಕ್ರೆ, ತಮ್ಮ ಆಡಳಿತವು ಕೋವಿಡ್-19 ಪರಿಸ್ಥಿತಿ, ಚಂಡಮಾರುತಗಳು ಮತ್ತು ಪ್ರವಾಹಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ ಮತ್ತು ಜನರ ಬೆಂಬಲದೊಂದಿಗೆ ರಾಜಕೀಯ ಚಂಡಮಾರುತವನ್ನು ಸಹ ನಿಭಾಯಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com