ಜಮ್ಮು: ತಲೆಗೆ ಬುಲೆಟ್ ಹೊಕ್ಕಿದ ಸ್ಥಿತಿಯಲ್ಲಿ ಭಾರತೀಯ ಯೋಧನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

ತಲೆಗೆ ಗುಂಡು ಹೊಕ್ಕಿದ ಸ್ಥಿತಿಯಲ್ಲಿ ಸೇನಾ ಸಿಬ್ಬಂದಿಯ ಮೃತದೇಹ ಜಮ್ಮುವಿನ ಹೊರವಲಯದಲ್ಲಿರುವ ಶಿಬಿರದಲ್ಲಿ ಪತ್ತೆಯಾಗಿದ್ದು, ಯೋಧ ತನ್ನ ಸೇವಾ ರೈಫಲ್‌ನಿಂದ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Published: 19th September 2020 04:52 PM  |   Last Updated: 19th September 2020 04:52 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : PTI

ಜಮ್ಮು: ತಲೆಗೆ ಗುಂಡು ಹೊಕ್ಕಿದ ಸ್ಥಿತಿಯಲ್ಲಿ ಸೇನಾ ಸಿಬ್ಬಂದಿಯ ಮೃತದೇಹ ಜಮ್ಮುವಿನ ಹೊರವಲಯದಲ್ಲಿರುವ ಶಿಬಿರದಲ್ಲಿ ಪತ್ತೆಯಾಗಿದ್ದು, ಯೋಧ ತನ್ನ ಸೇವಾ ರೈಫಲ್‌ನಿಂದ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪಂಜಾಬ್ ನಿವಾಸಿ 36 ವರ್ಷದ ಹವಾಲ್ದಾರ್ ಹರ್ವಿಂದರ್ ಸಿಂಗ್ ಅವರ ಮೃತದೇಹ ಜೂರಿಯನ್ ಪ್ರದೇಶದ ರಾಖ್ ಮುತಿ ಕ್ಯಾಂಪ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಯೋಧ ತನ್ನ ಸೇವಾ ರೈಫಲ್‌ನಿಂದ ತನ್ನ ಪ್ರಾಣವನ್ನು ತೆಗೆದುಕೊಂಡಿರಬಹುದು ಎಂದು ಅವರು ಹೇಳಿದರು.

ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ಅವರ ಘಟಕಕ್ಕೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp