ಸಿಎಜಿ ವರದಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುತ್ತಿದೆ: ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ರಷ್ಯಾದ ಡಸಾಲ್ಟ್‌ ಏವಿಯೇಷನ್ ಕಂಪನಿಯೊಂದಿಗಿನ ಒಪ್ಪಂದಗಳನ್ನು ಪಾಲಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಹಿರಂಗಪಡಿಸಿದ ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

Published: 24th September 2020 06:10 PM  |   Last Updated: 24th September 2020 08:02 PM   |  A+A-


chidambaram

ಚಿದಂಬರಂ

Posted By : vishwanath
Source : UNI

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ರಷ್ಯಾದ ಡಸಾಲ್ಟ್‌ ಏವಿಯೇಷನ್ ಕಂಪನಿಯೊಂದಿಗಿನ ಒಪ್ಪಂದಗಳನ್ನು ಪಾಲಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಹಿರಂಗಪಡಿಸಿದ ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, 2019ರ ಸೆ.23ರಂದು ಆರಂಭಗೊಂಡ ಆಫ್‌ಸೆಟ್‌ ಬದ್ಧತೆಗಳು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಅದು ಪೂರ್ಣಗೊಂಡಿದೆಯೇ ಎಂದು ಸರ್ಕಾರ ಸ್ಪಷ್ಟನೆ ನೀಡುತ್ತದೆಯೇ. ಸಿಎಜಿ ವರದಿ ಈ ಅಕ್ರಮಗಳನ್ನು ಬಯಲಿಗೆಳೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಿಎಜಿ ವರದಿಯಲ್ಲಿ, ಒಪ್ಪಂದಲ್ಲಿ ರಫೇಲ್‌ ಯುದ್ಧ ವಿಮಾನದ ಮಾರಾಟಗಾರರು ತಂತ್ರಜ್ಞಾನದ ವರ್ಗಾವಣೆಯನ್ನು ದೃಢಪಡಿಸಿಲ್ಲ ಎಂದಿದ್ದಾರೆ.

ಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ತೋರುತ್ತಿರುವ ವಿಳಂಬದ ಕುರಿತಂತೆ ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಹೌದು...ಭಾರತಕ್ಕೆ 59 ಸಾವಿರ ಕೋಟಿ ರೂಪಾಯಿ ವೆಚ್ಚದ ಒಪ್ಪಂದದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದದಲ್ಲಿ ಪ್ರಮುಖ ಕಂಪನಿಗಳಾದ ಡಸಾಲ್ಟ್ ಏವಿಯೇಶನ್ ಮತ್ತು ಎಂಬಿಡಿಎ, ಭಾರತಕ್ಕೆ ಉನ್ನತ ತಂತ್ರಜ್ಞಾನವನ್ನು ಪೂರೈಸುವ ಬದ್ಧತೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿತ್ತು.

ಭಾರತ ಮತ್ತು ಫ್ರಾನ್ಸ್ ನಡುವಿನ ಈ ಒಪ್ಪಂದದ ಅನ್ವಯ ಫ್ರಾನ್ಸ್‌ನ ಉಭಯ ಕಂಪನಿಗಳು ಒಟ್ಟು ಗುತ್ತಿಗೆ ಮೌಲ್ಯದ ಶೇ.50ರಷ್ಟನ್ನು ಭಾರತದ ಆಫ್ ಸೆಟ್ ಕಂಪನಿಗಳಲ್ಲಿ ಮರುಹೂಡಿಕೆ ಮಾಡಬೇಕು. ಇದೇ ವಿಚಾರವಾಗಿ ಬುಧವಾರ "ಮ್ಯಾನೇಜ್ಮೆಂಟ್ ಆಫ್ ಡಿಫೆನ್ಸ್ ಆಫ್‌ಸೆಟ್ಸ್" ಎಂಬ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ವರದಿಯಲ್ಲಿ ಸಿಎಜಿ  ಈ ಮಾಹಿತಿ ನೀಡಿದೆ. 2015ರ ಸೆಪ್ಟೆಂಬರ್‌ನಲ್ಲಿ ಉಭಯ ಕಂಪನಿಗಳು ನೀಡಿದ್ದ ಆರಂಭಿಕ ಭರವಸೆಯಂತೆ, ಡಿಆರ್‌ಡಿಓಗೆ "ಅತ್ಯುನ್ನತ ತಂತ್ರಜ್ಞಾನ" ಪೂರೈಸುವ ಮೂಲಕ ಆಫ್ ಸೆಟ್ ಬದ್ಧತೆಯ ಶೇ. 30ರಷ್ಟು ಈಡೇರಿಸಬೇಕಿತ್ತು. ಆದರೆ ಇದರಲ್ಲಿ ಈ ಕಂಪನಿಗಳು ವಿಫಲವಾಗಿವೆ. ಭಾರತಕ್ಕೆ ರಫೆಲ್ ಯುದ್ಧ ವಿಮಾನ ಜೊತೆ ತಂತ್ರಜ್ಞಾನದ ವಿನಿಮಯ ಕೂಡ ಆಗಬೇಕಿತ್ತು. ಆದರೆ ಈ ವರೆಗೂ ಅದು ಆಗಿಲ್ಲ ಎಂದು ವಿವರಿಸಿದೆ. 

ಆದರೆ ಈ ಭರವಸೆಗಳನ್ನು ಈಡೇರಿಸಲು ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ ಏಳು ವರ್ಷಗಳ ಕಾಲಾವಕಾಶವಿದ್ದು, ಮೊದಲ ಮೂರು ವರ್ಷಗಳಿಗೆ ಇಂಥಹ ಯಾವುದೇ ಬದ್ಧತೆ ಇರುವುದಿಲ್ಲ ಎಂದೂ ವರದಿ ಸ್ಪಷ್ಟಪಡಿಸಿದ್ದು, ಆದಾಗ್ಯೂ ಒಪ್ಪಂದದ ಅನ್ವಯ ಎಂಬಿಡಿಎಯ ಒಟ್ಟು ಬದ್ಧತೆಯ ಶೇ. 57ರಷ್ಟನ್ನು ಹಾಗೂ ಡಸಾಲ್ಟ್‌ನ ಒಟ್ಟು ಬದ್ಧತೆಯ ಶೇ. 58ನ್ನು ಮಾತ್ರ ಕೊನೆಯ ಅಥವಾ ಏಳನೇ ವರ್ಷದಲ್ಲಿ (2023) ಈಡೇರಿಸಬೇಕಾಗುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp