ಛತ್ತೀಸ್ ಘರ್: ಐಇಡಿ ಸ್ಫೋಟ, ಬಿಎಸ್‌ಎಫ್ ಜವಾನನಿಗೆ ಗಾಯ 

ಸುಧಾರಿತ ಸ್ಫೋಟಕ ಸಾಧನ( (ಐಇಡಿ), ಸ್ಫೋಟದ ಕಾರಣದಿಂದ ಗಡಿ ಭದ್ರತಾ ಪಡೆಗಳ (ಬಿಎಸ್‌ಎಫ್) ಜವಾನನೊಬ್ಬ ಗಾಯಗೊಂಡಿರುವ ಘಟನೆ ಛತ್ತೀಸ್ ಘರ್ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. 
ಛತ್ತೀಸ್ ಘರ್: ಐಇಡಿ ಸ್ಫೋಟ, ಬಿಎಸ್‌ಎಫ್ ಜವಾನನಿಗೆ ಗಾಯ 

ರಾಯ್‌ಪುರ: ಸುಧಾರಿತ ಸ್ಫೋಟಕ ಸಾಧನ( (ಐಇಡಿ), ಸ್ಫೋಟದ ಕಾರಣದಿಂದ ಗಡಿ ಭದ್ರತಾ ಪಡೆಗಳ (ಬಿಎಸ್‌ಎಫ್) ಜವಾನನೊಬ್ಬ ಗಾಯಗೊಂಡಿರುವ ಘಟನೆ ಛತ್ತೀಸ್ ಘರ್ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. 

ಮಧ್ಯಾಹ್ನ 1.30 ರ ಸುಮಾರಿಗೆ ಕೊಯಲಿಬೆಡಾ-ಧುತ್ತಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದಾಗಿ ಪೋಲೀಸರು ಹೇಳಿದ್ದಾರರೆ. ರಸ್ತೆ ಭದ್ರತಾ ಕಾರ್ಯಾಚರಣೆಯಲ್ಲಿ ಬಿಎಸ್‌ಎಫ್‌ನ 4 ನೇ ಬೆಟಾಲಿಯನ್ ತಂಡ ತೊಡಗಿಕೊಂಡಿದ್ದಾಗಿ ಕಂಕೇರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋರಖನಾಥ್ ಬಾಗೆಲ್ ತಿಳಿಸಿದ್ದಾರೆ.

ಪೆಟ್ರೋಲಿಂಗ್ ತಂಡವು ಕಾಡಿನಲ್ಲಿ ನಕ್ಸಲ್ ವಿರುದ್ಧದ ತಪಾಸಣೆ ಅನ್ಡೆಸುತ್ತಿದ್ದ ವೇಳೆ ಐಇಡಿ ಸಂಪರ್ಕಕ್ಕೆ ಬಂದಿರಬಹುದು ಎಂದು ಅವರು ಹೇಳಿದ್ದಾರೆ.

ಸ್ಫೋಟದಲ್ಲಿ ಕಾನ್‌ಸ್ಟೆಬಲ್ ವೀರೇಂದ್ರ ತುದ್ದು ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಜವಾನನ್ನು  ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com