ಕೃಷಿ ಮಸೂದೆ: ಸೆಪ್ಚಂಬರ್ 29ರವರೆಗೆ ಪಂಜಾಬ್ ನಲ್ಲಿ ರೈಲ್ ರೋಕೋ ಚಳವಳಿ ವಿಸ್ತರಣೆ

ಕೃಷಿ ಮಸೂದೆ ವಿರೋಧಿಸಿ ರೈತರು ಹಮ್ಮಿಕೊಂಡಿದ್ದ ರೈಲ್ ರೋಕೋ ಚಳವಳಿಯನ್ನು ಪಂಜಾಬಿನಲ್ಲಿ ಮೂರು ದಿನಗಳ ಕಾಲ ವಿಸ್ತರಿಸಿದೆ.
ರೈಲ್ ರೋಕೋ ಚಳವಳಿಯಲ್ಲಿ ರೈತರು
ರೈಲ್ ರೋಕೋ ಚಳವಳಿಯಲ್ಲಿ ರೈತರು

ಅಮೃತಸರ: ಕೃಷಿ ಮಸೂದೆ ವಿರೋಧಿಸಿ ರೈತರು ಹಮ್ಮಿಕೊಂಡಿದ್ದ ರೈಲ್ ರೋಕೋ ಚಳವಳಿಯನ್ನು ಪಂಜಾಬಿನಲ್ಲಿ ಮೂರು ದಿನಗಳ ಕಾಲ ವಿಸ್ತರಿಸಿದೆ.

ರೈಲ್ ರೋಕೋ ಚಳವಳಿಯನ್ನು ಸೆಪ್ಟಂಬರ್ 26 ರಿಂದ ಸೆಪ್ಟಂಬರ್ 29ರವರೆಗೆ ವಿಸ್ತರಿಸಲಾಗಿದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ರಾಜ್ಯ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂದೇರ್ ತಿಳಿಸಿದ್ದಾರೆ.

ರೈತರ ಪ್ರತಿಭನೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸೆಪ್ಟಂಬರ್ 24 ರಿಂದ 26 ರವರೆಗೆ ಫಿರೋಜ್ ಪುರ ವಿಭಾಗದ ಎಲ್ಲಾ ರೈಲು ಸಂಚಾರವನ್ನು ರದ್ದುಗೊಳಿಸಿತ್ತು. ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಸೆಪ್ಟಂಬರ್ 27 ರಂದು ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಸೆಪ್ಟಂಬರ್ 28 ರಂದು ಭಗತ್ ಸಿಂಗ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಯುವಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೋಳ್ಳಲಿದ್ದಾರೆ.

ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತ್ತು ಯಾವುದೇ ರಾಜಕಾರಣಿಗಳು ಬಂದು ರೈತರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com