ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ 

ಅಕ್ಟೋಬರ್ 1 ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ ಬರಲಿವೆ. 
ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ
ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ

ಅಕ್ಟೋಬರ್ 1 ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ ಬರಲಿವೆ. 

ದಿನನಿತ್ಯ ಉಪಯೋಗವಾಗುವ ನಿಯಮಗಳು ಇವುಗಳಾಗಿದ್ದು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. 
  
ಮುಖ್ಯ ಬದಲಾವಣೆಗಳು ಹೀಗಿರಲಿವೆ.

1. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಕಾರ್ಡ್ ವಿತರಣೆ ಹಾಗೂ ಡಿಎಲ್ ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದೆ. ಡಿಎಲ್ ಹಾಗೂ ಆರ್ ಸಿಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. 

2. ನೀವು ಕ್ರೆಡಿಟ್ ಕಾರ್ಡ್ ಗಳ ಮೂಲಕ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸಿದ ಪಾವತಿ ಮಾಡಿದರೆ ಅ.1 ರಿಂದ ಅದಕ್ಕೆ ರಿಯಾಯಿತಿ ದೊರೆಯುವುದಿಲ್ಲ. 

3. ಅ.1 ರಿಂದ ಏಕರೂಪದ ವಾಹನ ನೋಂದಣಿ ಕಾರ್ಡ್‌ಗಳು ಆರ್ ಸಿ, ಡಿಎಲ್ ಗಳನ್ನು ನೀಡಲಾಗುತ್ತದೆ. ಹೊಸ ಕಾರ್ಡ್ ನಲ್ಲಿ ಅತ್ಯಾಧುನಿಕ ಮೈಕ್ರೋಚಿಪ್ ಇರಲಿದ್ದು, ಕ್ಯುಆರ್ ಕೋಡ್ ಹಾಗೂ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್ಎಫ್ ಸಿ) ಗಳು ಇರಲಿವೆ. 

4. ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷದ ವರೆಗೆ ಕೇಂದ್ರೀಕೃತ ಆನ್ ಲೈನ್ ಡಾಟಾ ಬೇಸ್ ನ್ನು ನಿರ್ವಹಿಸಲು ಸಾಧ್ಯವಾಗಿಸಲಿದೆ. 

5. ಅಷ್ಟೇ ಅಲ್ಲದೇ ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು, ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಿಸಲಿದೆ. 

6. ಆರ್ ಸಿಗಳ ಪ್ರಕ್ರಿಯೆಯನ್ನು ಸಂಪೂರ್ಣ ಪೇಪರ್ ರಹಿತಗೊಳಿಸಲು ಸಾಧ್ಯವಾಗಿಸಲಿವೆ. 

7.  ಡೆಬಿಟ್ ಕಾರ್ಡ್ ಹಾಗೂ ಇತರ ಡಿಜಿಟಲ್ ಮೋಡ್ ಗಳ ಮೂಲಕ ಇಂಧನ ತುಂಬಿಸುವ ಪಾವತಿಗಳಲ್ಲಿ ರಿಯಾಯಿತಿ ದೊರೆಯಲಿದೆ. 

8. ಗೃಹ ಸಾಲ ವಾಹನ, ಖಾಸಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆ 

9. ಎಸ್ ಬಿಐ ಬ್ಯಾಂಕ್ ಸರಾಸರಿ ತಿಂಗಳ ಉಳಿತಾಯದ ಮೊತ್ತವನ್ನು ಕಡಿಮೆ ಮಾಡಲಿದ್ದು, ಒಂದು ವೇಳೆ ಕನಿಷ್ಟ ಮೊತ್ತ ಖಾತೆಯಲ್ಲಿ ಇಲ್ಲದೇ ಇದ್ದಿದ್ದರೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನೂ ಕಡಿಮೆ ಮಾಡಲಿದೆ.

10. ಕನಿಷ್ಟ ತಿಂಗಳ ಬ್ಯಾಲೆನ್ಸ್ 3,000, ಗ್ರಾಮೀಣ ಭಾಗದಲ್ಲಿ 1,000 ರೂಪಾಯಿಗಳಿಗೆ ಮಿನಿಮಮ್ ಬ್ಯಾಲೆನ್ಸ್ ಅ.1 ರಿಂದ ನಿಗದಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com