ಈ ಬಾರಿ ಅಯೋಧ್ಯೆಯಲ್ಲಿ ನಡೆಯುವುದಿಲ್ಲ ರಾಮ್ ಲೀಲಾ, ವರ್ಚ್ಯುಯಲ್ ದೀಪೋತ್ಸವಕ್ಕೆ ತಯಾರಿ

ಅಯೋಧ್ಯೆ ಆಡಳಿತ ಈ ಬಾರಿ ಅಯೋಧ್ಯೆಯಲ್ಲಿ ರಾಮ್ ಲೀಲಾ ನಡೆಸುವುದಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ನಿರಾಕರಿಸಿದೆ. 

Published: 28th September 2020 11:08 AM  |   Last Updated: 28th September 2020 12:03 PM   |  A+A-


No Ram Leela in Ayodhya this year, virtual Deepotsav to be held

ಈ ಬಾರಿ ಅಯೋಧ್ಯೆಯಲ್ಲಿ ನಡೆಯುವುದಿಲ್ಲ ರಾಮ್ ಲೀಲಾ, ವರ್ಚ್ಯುಯಲ್ ದೀಪೋತ್ಸಕ್ಕೆ ತಯಾರಿ

Posted By : Srinivas Rao BV
Source : Online Desk

ಅಯೋಧ್ಯೆ: ಅಯೋಧ್ಯೆ ಆಡಳಿತ ಈ ಬಾರಿ ಅಯೋಧ್ಯೆಯಲ್ಲಿ ರಾಮ್ ಲೀಲಾ ನಡೆಸುವುದಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ನಿರಾಕರಿಸಿದೆ. 

ಆದರೆ ಈ ಬಾರಿ ದೀಪಾವಳಿ ಆಚರಣೆಗಾಗಿ ವರ್ಚ್ಯುಯಲ್ ದೀಪೋತ್ಸವ ನಡೆಸುವುದಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. 

ರಾಮ್ ಲೀಲಾ ನಡೆಸುವುದಕ್ಕೆ ಅಯೋಧ್ಯ ಶೋಧ್ ಸಂಸ್ಥಾನ್ ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಅಯೋಧ್ಯ ಶೋಧ್ ಸಂಸ್ಥಾನದ ವ್ಯವಸ್ಥಾಪಕರಾದ ರಾಮ್ ತೀರ್ಥ್ ಹೇಳಿದ್ದಾರೆ. 

ರಾಮ್ ಲೀಲಾ ಗೆ ನಿರ್ಬಂಧ ವಿಧಿಸಿರುವುದರಿಂದ 300 ಕ್ಕೂ ಹೆಚ್ಚು ರಾಮ್ ಲೀಲಾ ಕಲಾವಿದರು ಜೀವನೋಪಾಯಕ್ಕಾಗಿ ಕಳೆದ 7 ತಿಂಗಳುಗಳಿಂದ ಕಷ್ಟಪಡುತ್ತಿದ್ದಾರೆ. ಸರ್ಕಾರ ಅವರಿಗೆ ವೇತನ ನೀಡಿಲ್ಲ ಎಂದು ರಾಮ್ ಲೀಲಾ ಕಲಾವಿದರೊಬ್ಬರು ಮಾಹಿತಿ ನೀಡಿದ್ದಾರೆ. 

2017 ರಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದಾಗಿನಿಂದಲೂ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಣೆ ತಂದಿದ್ದರು. ಈ ಬಾರಿ ವರ್ಚ್ಯುಯಲ್ ದೀಪೋತ್ಸವ ನಡೆಯಲಿದೆ. 

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp