ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ ಬಾಬ್ರಿ ಮಸೀದಿ ಧ್ವಂಸ ತೀರ್ಪು: ವಿಡಿಯೊ ಕಾನ್ಫರೆನ್ಸ್ ಮೂಲಕ ಅಡ್ವಾಣಿ, ಜೋಷಿ ಹಾಜರು

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಇನ್ನು ಕೆಲವೇ ಹೊತ್ತಿನಲ್ಲಿ ಹೊರಬರಲಿದ್ದು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಇಂದು ನ್ಯಾಯಾಲಯ ಮುಂದೆ ಹಾಜರಾಗುವುದಿಲ್ಲ ಎಂದು ತಿಳಿದುಬಂದಿದೆ.
ಅಯೋಧ್ಯೆಯ ಮಸೀದಿಯೊಂದರ ಮುಂದೆ ಕಳೆದ ವರ್ಷ ಪೊಲೀಸರ ಸರ್ಪಗಾವಲು
ಅಯೋಧ್ಯೆಯ ಮಸೀದಿಯೊಂದರ ಮುಂದೆ ಕಳೆದ ವರ್ಷ ಪೊಲೀಸರ ಸರ್ಪಗಾವಲು

ಲಕ್ನೊ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಇನ್ನು ಕೆಲವೇ ಹೊತ್ತಿನಲ್ಲಿ ಹೊರಬರಲಿದ್ದು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಇಂದು ನ್ಯಾಯಾಲಯ ಮುಂದೆ ಹಾಜರಾಗುವುದಿಲ್ಲ ಎಂದು ತಿಳಿದುಬಂದಿದೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಇಂದು ತೀರ್ಪು ಹೊರಬರುವ ಸಂದರ್ಭದಲ್ಲಿ ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯದ ಎದುರು ರಾಮ ಜನ್ಮಭೂಮಿ ನ್ಯಾಸ ಮುಖ್ಯಸ್ಥ ನೃತ್ಯ ಗೋಪಾಲ ದಾಸ್ ಅವರು ಕೂಡ ಗೈರಾಗಲಿದ್ದಾರೆ ಎಂದು ಅವರ ಪರ ನ್ಯಾಯಾಧೀಶ ಕೆ ಕೆ ಮಿಶ್ರಾ ತಿಳಿಸಿದ್ದಾರೆ.

ಇತರ ಆರೋಪಿಗಳಾದ ವಿನಯ್ ಕತಿಯಾರ್, ಧರಮ್ ದಾಸ್, ವೇದಾಂತಿ, ಲಲ್ಲು ಸಿಂಗ್, ಚಂಪತ್ ರೈ ಮತ್ತು ಪವನ್ ಪಾಂಡೆ ಲಕ್ನೊಗೆ ಆಗಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com