ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಇಟಾವದಲ್ಲಿ ಪ್ರಪಾತಕ್ಕೆ ಉರುಳಿದ 54 ಮಂದಿಯಿದ್ದ ಮಿನಿ ಟ್ರಕ್, 11 ಮಂದಿ ದುರ್ಮರಣ

ಜಿಲ್ಲೆಯ ಬಾದಾಪುರ ಪ್ರದೇಶದಲ್ಲಿ ಶನಿವಾರ ಸಂಜೆ ಟ್ರಕ್‍ ವೊಂದು ಕಮರಿಯೊಂದಕ್ಕೆ ಉರುಳಿ ಕನಿಷ್ಠ 11 ಮಂದಿ ಮೃತಪಟ್ಟು ಇತರ 35 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಟಾವ(ಉತ್ತರಪ್ರದೇಶ): ಜಿಲ್ಲೆಯ ಬಾದಾಪುರ ಪ್ರದೇಶದಲ್ಲಿ ಶನಿವಾರ ಸಂಜೆ ಟ್ರಕ್‍ ವೊಂದು ಕಮರಿಯೊಂದಕ್ಕೆ ಉರುಳಿ ಕನಿಷ್ಠ 11 ಮಂದಿ ಮೃತಪಟ್ಟು ಇತರ 35 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಆಗ್ರಾದ ಪಿನ್ಹಾಟ್ ಹಳ್ಳಿಯಿಂದ ಲಜ್ನಾ ಪ್ರದೇಶದ ಕಲ್ಕಾ ದೇವಿ ದೇವಸ್ಥಾನಕ್ಕೆ ಹೋಗುತ್ತಿದ್ದ ಮಿನಿ ಟ್ರಕ್ ಸಂಜೆ 5 ಗಂಟೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಕಸೌವಾ ಬಳಿಯ ಚಕ್ರನಗರ-ಉಡಿ ರಸ್ತೆಯಲ್ಲಿ ರಸ್ತೆಗೆ 25 ಅಡಿ ಆಳಕ್ಕೆ ಉರುಳಿದೆ ಎಂದು  ಎಸ್‌ಎಸ್‌ಪಿ ಡಾ. ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಆಗ್ರದ ಲಿಜ್ಹಾನಾದಲ್ಲಿರುವ ಕಲ್ಕಾ ದೇವಿ ದೇವಸ್ಥಾನಕ್ಕೆ ಮಿನಿ ಟ್ರಕ್ ನಲ್ಲಿ 54 ಮಂದಿ ತೆರಳುತ್ತಿದ್ದಾಗ ಟ್ರಕ್ ಪ್ರಪಾತಕ್ಕೆ ಉರುಳಿ ಬಿದ್ದಿದ್ದೆ. ದುರ್ಘಟನೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. 

ಇನ್ನು 35 ಮಂದಿ ಗಾಯಗೊಂಡಿದ್ದು ಈ ಪೈಕಿ 10 ಮಂದಿ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. 

ಮೃತರನ್ನು ಬನ್ವಾರಿ, ಮಹೇಶ್, ಲಾಲು, ರಾಜೇಶ್, ರಾಜೇಂದ್ರ, ಗುಲಾಬ್ ಸಿಂಗ್, ಮನೋಜ್, ಕೃಷ್ಣ, ಹಕೀಮ್ ಸಿಂಗ್, ಗುಡ್ಡು ಮತ್ತು ರಾಮದಾಸ್ ಎಂದು ಗುರುತಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com