
ಲಕ್ನೋ: ಐತಿಹಾಸಿಕ ಬಾಬ್ರಿ ಮಸೀದಿ ತೀರ್ಪು ನೀಡಿದ್ದ ನಿವೃತ್ತ ನ್ಯಾಯಮೂರ್ತಿ ಸುರೇಂದ್ರ ಕುಮಾರ್ ಯಾದವ್ ಉತ್ತರ ಪ್ರದೇಶದ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ.
ಉತ್ತರ ಪ್ರದೇಶದ ಮೂರನೇ ಉಪ ಲೋಕಾಯುಕ್ತರಾಗಿ ಯಾದವ್ ಅವರನ್ನು ರಾಜ್ಯಪಾಲರು ಏಪ್ರಿಲ್ 6ರಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಪ್ರಮುಖ ಲೋಕಾಯುಕ್ತ ಸಂಸ್ಥೆಯು ಲೋಕಾಯುಕ್ತ ಮತ್ತು ಮೂರು ಉಪ ಲೋಕಾಯುಕ್ತರನ್ನೊಳಗೊಂಡಿದೆ.
ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿ, ಸುರೇಂದ್ರ ಕುಮಾರ್ ಯಾದವ್ ಸೆಪ್ಟೆಂಬರ್ 30, 2020 ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಬಿಜೆಪಿ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದರು.
Advertisement