ರಾಷ್ಟ್ರೀಯ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚಾರಣೆ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಾಮಿತ್ವ ಯೋಜನೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚಾರಣೆ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಾಮಿತ್ವ ಯೋಜನೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದರು.

ಗ್ರಾಮೀಣಾ ಜನತೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಾಮಿತ್ವ ಯೋಜನೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದ್ದಾರೆ. ಸುಮಾರು 4.09 ಲಕ್ಷ ಮಂದಿಗೆ ಸಂಬಂಧಿಸಿದ ಆಸ್ತಿ ಮಾಲೀಕತ್ವದ ಇ-ಪ್ರಾಪರ್ಟಿ ಕಾರ್ಡ್  ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯ ಮೂಲಕ ಬ್ಯಾಂಕಿನಿಂದ ಸಾಲ ಪಡೆಯುವುದು ಗ್ರಾಮಸ್ಥರಿಗೆ ಈಗ ಸರಳವಾಗಲಿದೆ. 

ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಆಯ್ದ ಹಳ್ಳಿಗಳಲ್ಲಿ 2020-21ನೇ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಇದನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. 

ಈ ಹಿಂದೆ ಸ್ವಾಮಿತ್ವ [ಹಳ್ಳಿಗಳ ಸಮೀಕ್ಷೆ ಮತ್ತು ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ ಮಾಡುವ] ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 2020 ರ ಏಪ್ರಿಲ್ 24 ರಂದು ಉದ್ಘಾಟನೆ ಮಾಡಿದ್ದರು. ಗ್ರಾಮೀಣ ಭಾರತದಲ್ಲಿ ಸ್ವಾವಲಂಬನೆ ಮತ್ತು ಸಾಮಾಜಿಕ –  ಆರ್ಥಿಕ ಸಬಲೀಕರಣ ಉದ್ದೇಶದಿಂದ ಈ ಕೇಂದ್ರೀಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿ ಮ್ಯಾಪಿಂಗ್ ಮಾಡಿ ಮತ್ತು ಸಮೀಕ್ಷೆ ಕೈಗೊಳ್ಳುವ ಮೂಲಕ ಗ್ರಾಮೀಣ ಭಾರತದಲ್ಲಿ ಪರಿವರ್ತನೆ ತರುವ ಉದ್ದೇಶವನ್ನು ಈ ಯೋಜನೆ  ಒಳಗೊಂಡಿದೆ. ಗ್ರಾಮೀಣ ಜನತೆ ಸಾಲ ಮತ್ತು ಇತರೆ ಹಣಕಾಸಿನ ಸವಲತ್ತುಗಳನ್ನು ಪಡೆಯಲು ಗ್ರಾಮಸ್ಥರು ಆಸ್ತಿಯನ್ನು ಆರ್ಥಿಕ ಶಕ್ತಿಯಾಗಿ ಬಳಸಲು ಇದು ದಾರಿ ಮಾಡಿಕೊಡುತ್ತದೆ. 2021-2025 ರ ಅವಧಿಯಲ್ಲಿ ದೇಶದ ಸುಮಾರು 6.62 ಲಕ್ಷ ಹಳ್ಳಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.

ಅಂತೆಯೇ 2020-2021 ರ ಸಾಲಿನಲ್ಲಿ ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳ ಕೆಲ ಆಯ್ದ ಹಳ್ಳಿಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com