ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಆರು ರೋಗಿಗಳು ಸಾವು

ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ  ಕೊರತೆಯಿಂದ ಆರು ಮಂದಿ ರೋಗಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಈ ಪೈಕಿ ಐವರು ಕೋವಿಡ್-19 ರೋಗಿಗಳಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಂಡೀಘಡ: ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ  ಕೊರತೆಯಿಂದ ಆರು ಮಂದಿ ರೋಗಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಈ ಪೈಕಿ ಐವರು ಕೋವಿಡ್-19 ರೋಗಿಗಳಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಮೃತಪಟ್ಟವರಲ್ಲಿ ಇಬ್ಬರು ಗುರುದಾಸ್ ಪುರದವರಾಗಿದ್ದು, ಒಬ್ಬರು ತರಣ್ ಟಾರ್ನ್ ಗೆ  ಸೇರಿದವರಾಗಿದ್ದಾರೆ.ಇವರೆಲ್ಲರೂ ಗಂಭೀರ ಸ್ಥಿತಿಯಲ್ಲಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು.

ಆಮ್ಲಜನಕ ಪೂರೈಸುವಂತೆ ಪದೇ ಪದೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಯಾರೂ ಕೂಡಾ ನೆರವು ನೀಡಲಿಲ್ಲ ಎಂದು ನೀಲ್ ಕಾಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ದೇವ್ ಗನ್ ಹೇಳಿದ್ದಾರೆ. 

ಆಮ್ಲಜನಕ ಕೊರತೆಯಿಂದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ರೋಗಿಗಳು ಸಾವನ್ನಪ್ಪಿದ್ದ ನಂತರ ಐದು ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ದೇವಗನ್ ತಿಳಿಸಿದ್ದಾರೆ.

ಆಮ್ಲಜನಕ ಪೂರೈಕೆಯ ವಿಷಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮೂರು ಪ್ರಮುಖ ಆಮ್ಲಜನಕ ಪೂರೈಕೆದಾರರು ಹೇಳಿದ್ದಾರೆ.ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ತಡೆಗಟ್ಟಲು ಆಮ್ಲಜನಕ ಘಟಕಗಳ ಹೊರಗೆ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ದೇವಗನ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com