ಮದುವೆ ಚಿತ್ರ
ಮದುವೆ ಚಿತ್ರ

ವರನಿಗೆ ಕೊರೋನಾ: ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದ ಜೋಡಿ, ವಿಡಿಯೋ ವೈರಲ್!

ಕೊರೋನಾ ಎರಡನೇ ಅಲೆ ದೇಶದಲ್ಲಿ ತೀವ್ರ ಸಂಕಷ್ಟ ತಂದಿಟ್ಟಿದ್ದು ಮಹಾಮಾರಿ ನಿಗ್ರಹಕ್ಕೆ ರಾಜ್ಯಗಳು ಕಠಿಣ ನಿರ್ಣಯಗಳನ್ನು ಕೈಗೊಳ್ಳುತ್ತಿವೆ. ಇದರ ಮಧ್ಯೆ ಮದುವೆ, ಅಂತ್ಯಕ್ರಿಯೆಗೆ ಕೆಲ ನಿರ್ಬಂಧಗಳನ್ನು ಹೇರಲಾಗಿದ್ದು ಈ ಹಿನ್ನೆಲೆಯಲ್ಲಿ ಕೊರೋನಾ ಪೀಡಿತ ವರ ಪಿಪಿಇ ಕಿಟ್ ಧರಿಸಿ ವಿವಾಹವಾಗಿದ್ದಾರೆ.

ಭೋಪಾಲ್: ಕೊರೋನಾ ಎರಡನೇ ಅಲೆ ದೇಶದಲ್ಲಿ ತೀವ್ರ ಸಂಕಷ್ಟ ತಂದಿಟ್ಟಿದ್ದು ಮಹಾಮಾರಿ ನಿಗ್ರಹಕ್ಕೆ ರಾಜ್ಯಗಳು ಕಠಿಣ ನಿರ್ಣಯಗಳನ್ನು ಕೈಗೊಳ್ಳುತ್ತಿವೆ. ಇದರ ಮಧ್ಯೆ ಮದುವೆ, ಅಂತ್ಯಕ್ರಿಯೆಗೆ ಕೆಲ ನಿರ್ಬಂಧಗಳನ್ನು ಹೇರಲಾಗಿದ್ದು ಈ ಹಿನ್ನೆಲೆಯಲ್ಲಿ ಕೊರೋನಾ ಪೀಡಿತ ವರ ಪಿಪಿಇ ಕಿಟ್ ಧರಿಸಿ ವಿವಾಹವಾಗಿದ್ದಾರೆ. 

ಮಧ್ಯಪ್ರದೇಶದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದ್ದು ರತ್ಲಮ್ ನಿವಾಸಿಗಳಾದ ವಧು ಮತ್ತು ವರ ಪಿಪಿಇ ಕಿಟ್ ಧರಿಸಿ ವಧು-ವರ ಪಿಪಿಇ ಕಿಟ್ ಧರಿಸಿ ಅಗ್ನಿಕುಂಡವನ್ನು ಸುತ್ತುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಮದುವೆ ವೇಳೆ ಪುರೋಹಿತರು ಹಾಗೂ ಕೆಲ ಬಂಧುಗಳು ಪಿಪಿಇ ಕಿಟ್ ಧರಿಸಿದ್ದರು. ಇನ್ನು ಮದುವೆ ಕುರಿತಂತೆ ಮಾತನಾಡಿರುವ ರತ್ಲಮ್ ತಹಶೀಲ್ದಾರ್ ನವೀನ್ ಗರ್ಗ್ ನಾವು ಮದುವೆ ನಿಲ್ಲಿಸಲು ಇಲ್ಲಿಗೆ ಬಂದಿದ್ದೇವು. ಆದರೆ ಹಿರಿಯ ಅಧಿಕಾರಿಗಳ ಕೋರಿಕೆ ಮತ್ತು ಮಾರ್ಗದರ್ಶನ ಮೇರೆಗೆ ಮದುವೆಗೆ ಅನುಮತಿ ನೀಡಲಾಯಿತು ಎಂದರು. 

Related Stories

No stories found.

Advertisement

X
Kannada Prabha
www.kannadaprabha.com