ಭಾರತಕ್ಕೆ ಪ್ರತಿನಿತ್ಯ 3 ಲಕ್ಷ ರೆಮ್ಡೆಸಿವಿರ್ ಬೇಕಿದ್ದು, 67 ಸಾವಿರ ಡೋಸ್ ಲಸಿಕೆ ತಯಾರಿಸಲಾಗುತ್ತಿದೆ: ಕೇಂದ್ರ ಸರ್ಕಾರ

ಭಾರತಕ್ಕೆ ಪ್ರತಿನಿತ್ಯ 3 ಲಕ್ಷ ಡೋಸ್ ರೆಮ್ಡೆಸಿವಿರ್ ಚುಚ್ಚುಮದ್ದಿನ ಅಗತ್ಯವಿದ್ದು, ಈ ಪೈಕಿ 67 ಸಾವಿರ ಚುಚ್ಚುಮದ್ದುಗಳನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರೆಮ್ಡೆಸಿವಿರ್
ರೆಮ್ಡೆಸಿವಿರ್
Updated on

ನವದೆಹಲಿ: ಭಾರತಕ್ಕೆ ಪ್ರತಿನಿತ್ಯ 3 ಲಕ್ಷ ಡೋಸ್ ರೆಮ್ಡೆಸಿವಿರ್ ಚುಚ್ಚುಮದ್ದಿನ ಅಗತ್ಯವಿದ್ದು, ಈ ಪೈಕಿ 67 ಸಾವಿರ ಚುಚ್ಚುಮದ್ದುಗಳನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿದ ಕೇಂದ್ರ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರೀಂಗ್ಲಾ ಅವರು, 'ನಮ್ಮ ಎಲ್ಲಾ ಕಾರ್ಯದರ್ಶಿಗಳು ಮತ್ತು ನಮ್ಮ ಎಲ್ಲ ರಾಯಭಾರಿಗಳು ಗಿಲ್ಯಾಡ್, ರೋಚೆ ಸಂಸ್ಥೆ ಸೇರಿದಂತೆ ಔಷಧಿ ತಯಾರಿಕೆಯಲ್ಲಿ ಭಾಗಿಯಾಗಿರುವ ಎಲ್ಲ ಕಂಪನಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾವು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದ್ದು, ಖಾಸಗಿ ವಲಯಗಳು, ಸಂಘಗಳು, ವಾಣಿಜ್ಯ ಸಂಘಟನೆಗಳು ಲಸಿಕೆ ಸಮರ್ಪಕ ವಿತರಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಎದುರಿಸುವಲ್ಲಿ ನಮ್ಮ ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ನಮ್ಮ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವಲ್ಲಿ ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅಗತ್ಯತೆಗಳನ್ನು ಪೂರೈಸಲು ಗಿಲ್ಯಾಡ್ ಸೈನ್ಸಸ್ ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಂಸ್ಥೆಗಳು ಸಂಪೂರ್ಣ ಭರವಸೆ ನೀಡಿದೆ. ಅಂತಾರಾಷ್ಟ್ರೀಯ ಸಹಕಾರವು ನಮ್ಮಲ್ಲಿರುವ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಮತ್ತು  ನಿವಾರಿಸುವಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ನಿಸ್ಸಂಶಯವಾಗಿ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಭಾರತವು ಸಾಮಾನ್ಯವಾಗಿ ದಿನಕ್ಕೆ 67,000 ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅನ್ನು ಉತ್ಪಾದಿಸುತ್ತಿದೆಯಾದರೂ, ಇಂದು ಇದರ ಅವಶ್ಯಕತೆ ದಿನಕ್ಕೆ 2-3 ಲಕ್ಷಗಳನ್ನು  ತಲುಪಿದೆ. ಇದನ್ನು ಮನಗಂಡ ಲಸಿಕೆ ತಯಾರಕರು ತಮ್ಮ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಶ್ರೀಂಗ್ಲಾ ಹೇಳಿದರು.

ರೆಮ್ಡೆಸಿವಿರ್ ಆಂಟಿ-ವೈರಲ್ ಔಷಧವನ್ನು ಆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿ ಭಾರತವು ಈಜಿಪ್ಟ್ ಮತ್ತು ವಿಶ್ವದ ಇತರ ಭಾಗಗಳಲ್ಲಿನ ರೆಮ್ಡೆಸಿವಿರ್ ನ ಇತರೆ ತಯಾರಕರೊಂದಿಗೆ ಸಂಪರ್ಕದಲ್ಲಿದೆ. ಗಿಲ್ಯಾಡ್ 4.5 ಲಕ್ಷ ಡೋಸ್ ರೆಮ್ಡೆಸಿವಿರ್ ನೀಡಲು ಬದ್ಧವಾಗಿದೆ. ಅವುಗಳನ್ನು ಬಾಂಗ್ಲಾದೇಶ,  ಉಜ್ಬೇಕಿಸ್ತಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ತಯಾರಿಸಲಾಗುತ್ತಿದೆ, ನಾವು ಅವರನ್ನು ಸಂಪರ್ಕಿಸಿದ್ದೇವೆ. ಈ ದಾಸ್ತಾನುಗಳನ್ನು ನಮ್ಮ ದೇಶದಲ್ಲಿ ಸಾಧ್ಯವಾದಷ್ಟು ಅಲ್ಪಾವಧಿಯ ಅಂತರದಲ್ಲಿ ಬೇಗ ಪೂರೈಸಲು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಹದಗೆಟ್ಟಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com