ಹೈದರಾಬಾದ್ ಹಿಂದೂಗಳಿಗೆ ಸೇರಿದ್ದು: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್

ಹೈದರಾಬಾದ್ ಹಿಂದೂಗಳಿಗೆ ಸೇರಿದ್ದು ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ನೀಡಿರುವ ವಿವಾದದ ಕಿಡಿ ಹೊತ್ತಿಸಿದೆ. 
ಬಂಡಿ ಸಂಜಯ್ ಕುಮಾರ್
ಬಂಡಿ ಸಂಜಯ್ ಕುಮಾರ್
Updated on

ಹೈದರಾಬಾದ್: ಹೈದರಾಬಾದ್ ಹಿಂದೂಗಳಿಗೆ ಸೇರಿದ್ದು ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ನೀಡಿರುವ ವಿವಾದದ ಕಿಡಿ ಹೊತ್ತಿಸಿದೆ. 

ಹೈದರಾಬಾದ್ ನವಾಬರ ಪಾರಂಪರಿಕ ನಗರವಲ್ಲ. ಅದು ಹಿಂದೂಗಳ ಪಾರಂಪರಿಕ ನಗರವಾಗಿದ್ದು, ಸುಳ್ಳು ನಿರೂಪಣೆಗಳನ್ನು ನಂಬದೇ ಇರುವಂತೆ ಜನತೆಗೆ ಕರೆ ನೀಡಿದ್ದಾರೆ. 

ಬೊನಾಲು ಹಬ್ಬದ ನಿಮಿತ್ತ ಹೈದರಾಬಾದ್ ನ ಲಾಲ್ ದರ್ವಾಜಾ ಮಹಾಕಾಲಿ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, "1883 ರಲ್ಲಿ ಪ್ಲೇಗ್ ಎದುರಾದಾಗ ಯೋಧರು ದೇವಿ ಲಾಲ್ ದರ್ವಾಜಾಗೆ ಸಾಂಕ್ರಾಮಿಕದ ರೋಗದಿಂದ ರಕ್ಷಣೆ ನೀಡುವಂತೆ ಮೊರೆ ಇಟ್ಟಿದ್ದರು. 

ಇತ್ತೀಚೆಗೆ ನಾನು ಪತ್ರಿಕೆಯಲ್ಲಿನ ಲೇಖನವನ್ನು ಓದುತ್ತಿದ್ದಾಗ ಅದರಲ್ಲಿ ಹೈದರಾಬಾದ್ ನವಾಬರ ಪಾರಂಪರಿಕ ನಗರ ಎಂದು ಬರೆದಿತ್ತು. ಈ ನಗರ ನವಾಬರದ್ದಾ? ಆ ದಿನಗಳಲ್ಲಿ ನವಾಬರೇ ಇರಲಿಲ್ಲ. ಸನಾತನ ಧರ್ಮ ಇತ್ತೀಚಿನದ್ದಲ್ಲ. ಅದು ಪುರಾತನವಾದದ್ದು, ಆದ್ದರಿಂದ ಈ ನಗರ ಹಿಂದೂಗಳಿಗೆ ಸೇರಿದ್ದು ಎಂದು ಸಂಜಯ್ ಕುಮಾರ್ ಹೇಳಿದ್ದಾರೆ. 

ಬೊನಾಲು ರೀತಿಯ ಹಬ್ಬಗಳನ್ನು ಹಿಂದೂಗಳ ಒಗ್ಗಟ್ಟಿಗಾಗಿ ಆಚರಣೆ ಮಾಡಲಾಗುತ್ತದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಹಿಂದೂಗಳು ಪರಸ್ಪರ ಸಹಾಯ ಮಾಡುವುದರಿಂದ ಈ ಉದ್ದೇಶ ಈಡೇರಲಿದೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಹೈದರಾಬಾದ್ ನಲ್ಲಿರುವ ದೇವಿಯ ವಿಗ್ರಹಕ್ಕೆ ಬಂಗಾರದ ಕಳಶ ಅರ್ಪಿಸುವುದಾಗಿ ಮಾಜಿ ಸಂಸದೆ, ಬಿಜೆಪಿ ನಾಯಕಿ ವಿಜಯಶಾಂತಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com