ಕೋವಿಡ್ ಲಸಿಕೆ ವಿತರಣಾ ಪ್ರಮಾಣ ಏರಿಕೆ, ಒಲಂಪಿಕ್ಸ್ ನಲ್ಲಿ ಹಾಕಿ ತಂಡಕ್ಕೆ ಜಯ: ಭಾರತದ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಫುಲ್ ಖುಷಿಯಾಗಿದ್ದು, ಇದಕ್ಕೆ ಇಂಬು ನೀಡುವಂತೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸೆಮಿಫೈನಲ್ ಗೇರಿರುವ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಫುಲ್ ಖುಷಿಯಾಗಿದ್ದು, ಇದಕ್ಕೆ ಇಂಬು ನೀಡುವಂತೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸೆಮಿಫೈನಲ್ ಗೇರಿರುವ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ.

ಹೌದು.. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆಯಾಗುತ್ತಿದ್ದು, ಜುಲೈನಲ್ಲಿ 13 ಕೋಟಿಗೂ ಹೆಚ್ಚು ಡೋಸ್‌ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ತಿಂಗಳು ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ವೇಗಗೊಳಿಸಲಾಗುವುದು  ಸರ್ಕಾರದ ಆದ್ಯತೆಯಾಗಿದೆ. ಇದರ ಬೆನ್ನಲ್ಲೇ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಪದಕ ಗೆಲವು, ಭಾರತ ಮಹಿಳಾ ಹಾಕಿ ತಂಡದ ಐತಿಹಾಸಿಕ ಸಾಧನೆಗಳು ದೇಶದ 130 ಕೋಟಿ ಭಾರತೀಯರಿಗೆ ಖುಷಿಯ ವಿಚಾರವಾಗಿದೆ. ಭಾರತೀಯರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತ ತಂಡ ಸಾಗಿದೆ. ಇಂದು ದೇಶದ  ಅಮೃತ ಮಹೋತ್ಸವದ ಆರಂಭ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

'2022 ರಲ್ಲಿ ಭಾರತಕ್ಕೆ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸರ್ಕಾರವು 'ಅಮೃತ್ ಮಹೋತ್ಸವ'ವನ್ನು ಆರಂಭಿಸಿದೆ. ಭಾರತವು ಅಮೃತ ಮಹೋತ್ಸವದ ಆರಂಭವನ್ನು ಸೂಚಿಸುವ ಆಗಸ್ಟ್ ತಿಂಗಳಲ್ಲಿ, ನಾವು ಅನೇಕ ಭಾರತೀಯರನ್ನು ಸಂತೋಷಪಡಿಸುವ ಅನೇಕ ಘಟನೆಗಳನ್ನು ನೋಡಿದ್ದೇವೆ.  ದಾಖಲೆಯ ವ್ಯಾಕ್ಸಿನೇಷನ್ ಮತ್ತು ಹೆಚ್ಚಿನ ಜಿಎಸ್ಟಿ ಸಂಖ್ಯೆಗಳು ದೃಢವಾದ ಆರ್ಥಿಕ ಚಟುವಟಿಕೆಯನ್ನು ಸೂಚಿಸುತ್ತಿವೆ. ಅಂತೆಯೇ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಅರ್ಹ ಪದಕವನ್ನು ಗೆದ್ದಿದ್ದು ಮಾತ್ರವಲ್ಲ, ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನಗಳನ್ನು ಒಲಿಂಪಿಕ್ಸ್‌ನಲ್ಲಿ ನೋಡಿದ್ದೇವೆ  ಎಂದು ಹೇಳಿದ್ದಾರೆ. 

'ಇದು 130 ಕೋಟಿ ಭಾರತೀಯರು ತಮ್ಮ 'ಅಮೃತ ಮಹೋತ್ಸವ'ವನ್ನು ಆಚರಿಸುವ ಹೊಸ್ತಿಲಲ್ಲಿದ್ದು, ಈ ಹೊತ್ತಿನಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿರುವ ಕುರಿತು ತಾನು ಆಶಾವಾದಿಯಾಗಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಜಿಎಸ್ ಟಿ ಸಂಗ್ರಹ ಏರಿಕೆಯು ಆರ್ಥಿಕ ಚಟುವಟಿಕೆ ಏರಿಕೆಯ ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ಮೋದಿ, ಕೋವಿಡ್ 2ನೇ ಅಲೆಯ ಬಳಿಕದ ನಿರ್ಬಂಧಗಳಿಂದಾಗಿ ಜಿಎಸ್ ಟಿ ಸಂಗ್ರಹದಲ್ಲಿ ಕುಸಿತ ಉಂಟಾಗಿತ್ತು. ಅದರಂತೆ ಜುಲೈನಲ್ಲಿ 1 ಲಕ್ಷ ಕೋಟಿ ರೂ. ಮಾತ್ರ ಸಂಗ್ರಹವಾಗಿತ್ತು. ದೇಶದ  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಅಭಿವೃದ್ಧಿಯು ವರ್ಷದಿಂದ ವರ್ಷಕ್ಕೆ ಶೇಕಡಾ 33 ರಷ್ಟು ಬೆಳೆಯುತ್ತಿದ್ದು, ಜುಲೈನಲ್ಲಿ 1.16 ಲಕ್ಷ ಕೋಟಿ ರೂಗೆ ಹೆಚ್ಚಾಗಿದೆ, ಇದು ಆರ್ಥಿಕತೆಯು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಸೂಚಿಸುತ್ತದೆ. ಜುಲೈ 2020 ರಲ್ಲಿ, ಸಂಗ್ರಹವು 87,422  ಕೋಟಿ ರೂ. ಗಳಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com