ಜಮ್ಮು ಕಾಶ್ಮೀರ: ಸಾಂಬಾ ಜಿಲ್ಲೆಯ 3 ಕಡೆ ಡ್ರೋಣ್ ಹಾರಾಟ, ಆತಂಕಗೊಂಡ ಸ್ಥಳೀಯರು

ಭಾರತದ ಗಡಿ ಪ್ರದೇಶದಲ್ಲಿ ಡ್ರೋಣ್'ಗಳ ಹಾರಾಟ ಹೆಚ್ಚಾಗುತ್ತಲೇ ಇದೆ .ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬ್ಯಾರಿ ಬ್ರಾಹ್ಮಣ ಏರಿಯಾದ ಮೂರು ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಡ್ರೋಣ್ ಗಳ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಭಾರತದ ಗಡಿ ಪ್ರದೇಶದಲ್ಲಿ ಡ್ರೋಣ್'ಗಳ ಹಾರಾಟ ಹೆಚ್ಚಾಗುತ್ತಲೇ ಇದೆ .ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಬ್ಯಾರಿ ಬ್ರಾಹ್ಮಣ ಏರಿಯಾದ ಮೂರು ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಡ್ರೋಣ್ ಗಳ ಹಾರಾಟ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಸಾಂಬಾದ ಎಸ್'ಪಿ ರಾಜೇಶ್ ಶರ್ಮಾ ಅವರು ಮಾಹಿತಿ ನೀಡಿದ್ದು, ಸಾಂಬಾದ ಬರಿಬ್ರಾಹ್ಮಣ ಪ್ರದೇಶದಲ್ಲಿ ತಡರಾತ್ರಿ ಶಂಕಿತ ಡ್ರೋಣ್ ಹಾರಾಟ ನಡೆಸಿದೆ ಎಂದು ತಿಳಿಸಿದ್ದಾರೆ.

ಬ್ಯಾರಿ ಬ್ರಾಹ್ಮಣದ 3 ಪ್ರದೇಶಗಳಲ್ಲಿ ಡ್ರೋನ್​ ಕಾಣಿಸಿಕೊಂಡಿದ್ದು, ಪೊಲೀಸ್ ಠಾಣೆಯ ಸಮೀಪ ಒಂದು ಡ್ರೋಣ್ ಹಾರಾಡ ಕಂಡುಬಂದಿದ್ದರೆ ಮತ್ತೊಂದು ಬಲೋಲ್ ಸೇತುವೆ ಬಳಿ ಪತ್ತೆಯಾಗಿದೆ. ಬ್ಯಾರಿ ಬ್ರಾಹ್ಮಣ, ಚಿಲಾದ್ಯ ಹಾಗೂ ಗಾಗ್ವಾಲ್ ಪ್ರದೇಶಗಳಲ್ಲಿ ಏಕಕಾಲಕ್ಕೆ ವೇಳೆಗೆ ಡ್ರೋನ್​ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ರಾಜೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.

ಕಳೆದ ಜೂನ್​ ತಿಂಗಳಿನಲ್ಲಿ ಜಮ್ಮುವಿನ ವಾಯುನೆಲೆ ಬಳಿ ಮೊದಲ ಬಾರಿಗೆ ಡ್ರೋಣ್​ ದಾಳಿ ನಡೆದಿತ್ತು. ಅದಾದ ಬಳಿಕ ಜಮ್ಮು-ಕಾಶ್ಮೀರದ ಅನೇಕ ಕಡೆಗಳಲ್ಲಿ ಹೀಗೆ ಡ್ರೋಣ್ ಹಾರಾಟ ಪತ್ತೆಯಾಗುತ್ತಲೇ ಇದೆ. ಇತ್ತೀಚೆಗೆ ಕಾಲಚಕ್​ ಏರಿಯಾದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋಣ್'ನ್ನು ಭದ್ರತಾಪಡೆಗಳು ಹೊಡೆದುರುಳಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com