ಒಲಂಪಿಕ್ಸ್ ಸೆಮಿಫೈನಲ್ ವೀಕ್ಷಣೆಗೆ ದೇಶದ ಹಾಕಿ ಸ್ಟಾರ್ 'ಸಲೀಮಾ' ಊರಲ್ಲಿ ಹೊಸ ಟಿವಿ ಸೆಟ್ ಅಳವಡಿಸಿದ ಜಿಲ್ಲಾಡಳಿತ!

ಅಂತಿಮವಾಗಿ, ಟೋಕಿಯೊ ಒಲಂಪಿಕ್ಸ್ ನ ಹಾಕಿ ಸೆಮಿಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಜಿಲ್ಲಾಡಳಿತ ಹೊಸ ಟಿವಿ ಸೆಟ್ ವೊಂದನ್ನು ಸಲೀಮಾ ಟೆಟೆ ಗ್ರಾಮದಲ್ಲಿ ಅಳವಡಿಸಿದೆ. ಜಪಾನ್ ನಲ್ಲಿ ಇತಿಹಾಸ ನಿರ್ಮಿಸದ ಭಾರತದ ವನಿತೆಯರ ಹಾಕಿ ತಂಡದ ಭಾಗವಾಗಿ ಸಲೀಮಾ ಜಾರ್ಖಂಡ್ ಗೆ ಕೀರ್ತಿ ತಂದಿದ್ದಾರೆ.
ವಂದನಾ ಕಟಾರಿಯಾ ಜೊತೆಗೆ ಸಲೀಮಾ ಟೆಟೆಯ ಸಂಭ್ರಮದ ಚಿತ್ರ
ವಂದನಾ ಕಟಾರಿಯಾ ಜೊತೆಗೆ ಸಲೀಮಾ ಟೆಟೆಯ ಸಂಭ್ರಮದ ಚಿತ್ರ

ರಾಂಚಿ: ಅಂತಿಮವಾಗಿ, ಟೋಕಿಯೊ ಒಲಂಪಿಕ್ಸ್ ನ ಹಾಕಿ ಸೆಮಿಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಜಿಲ್ಲಾಡಳಿತ ಹೊಸ ಟಿವಿ ಸೆಟ್ ವೊಂದನ್ನು ಸಲೀಮಾ ಟೆಟೆ ಗ್ರಾಮದಲ್ಲಿ ಅಳವಡಿಸಿದೆ. ಜಪಾನ್ ನಲ್ಲಿ ಇತಿಹಾಸ ನಿರ್ಮಿಸದ ಭಾರತದ ವನಿತೆಯರ ಹಾಕಿ ತಂಡದ ಭಾಗವಾಗಿ ಸಲೀಮಾ ಜಾರ್ಖಂಡ್ ಗೆ ಕೀರ್ತಿ ತಂದಿದ್ದಾರೆ.

ಸಲೀಮಾ ಟೆಟೆ ಹುಟ್ಟೂರು ಸಿಮ್ದೇಗಾದಲ್ಲಿ ಟಿವಿ ಸೆಟ್ ಮತ್ತು ಮೊಬೈಲ್ ಸಂಪರ್ಕತೆ ಕೊರತೆಯಿಂದಾಗಿ ಆಕೆಯ ಕುಟುಂಬ ಸದಸ್ಯರು ಹಾಗೂ ಇತರ ಗ್ರಾಮಸ್ಥರು ಪಂದ್ಯವನ್ನು ನೋಡಲು ಸಾಧ್ಯವಾಗದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮೊದಲ ಬಾರಿಗೆ ವರದಿ ಮಾಡಿತ್ತು.

ಸಲೀಮಾ ಟೆಟ್ ಮನೆಯಲ್ಲಿ 43 ಇಂಚಿನ ಹೊಸ ಸ್ಮಾರ್ಟ್ ಟಿವಿಯನ್ನು ಸೆಟ್ ಆಪ್ ಬಾಕ್ಸ್ ನೊಂದಿಗೆ ಅಳವಡಿಸಲಾಗಿದೆ. ಇದರಿಂದಾಗಿ ಆಕೆಯ ಕುಟುಂಬ ಸದಸ್ಯರು ಹಾಗೂ ಇತರರು ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ಕ್ರೀಡಾಧಿಕಾರಿ ತುಷಾರ್ ರಾಯ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇತರರಿಗೂ ಇದು ಸ್ಪೂರ್ತಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವುದಾಗಿ ತುಷಾರ್ ಹೇಳಿದರು.

ಸಲೀಮಾ ಜಾರ್ಖಂಡ್‌ನ ಅತ್ಯಂತ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾದ ಸಿಮ್ದೇಗಾದ ಬಡ್ಕಿಚಾಪರ್ ಹಳ್ಳಿಯಿಂದ ಬಂದವರು, ಇಲ್ಲಿರುವ 45 ಮನೆಗಳಲ್ಲಿ ಟಿವಿ ಸೆಟ್ ಇಲ್ಲ. ಇಂಟರ್ನೆಟ್ ಸಂಪರ್ಕ ಸಿಗದೆ ಜಿಲ್ಲಾಡಳಿತ ತನ್ನ ಸಹೋದರಿಯ ಆಟ ನೋಡಲು ವ್ಯವಸ್ಥೆ ಮಾಡಬೇಕೆಂದು ಆಕೆಯ ಸಹೋದರಿ ಮಹಿಮಾ ಟೆಟೆ ಕೋರಿದ್ದರು. ಒಲಂಪಿಕ್ಸ್ ನಲ್ಲಿ ಸಲೀಮಾ ಆಟ ನೋಡಿ ಖುಷಿ ಪಡಲು ಗ್ರಾಮಸ್ಥರಿಗೆ ಎಲ್ ಇಡಿ ಪರದೆ ವ್ಯವಸ್ಥೆ ಕಲ್ಪಿಸುವಂತೆ ಮಹಿಮಾ ಟಿಎನ್ಐಇ ಮೂಲಕ ಮನವಿ ಮಾಡಿದ್ದರು.

ಮಹಿಮಾ ಕೂಡಾ ರಾಷ್ಟ್ರಮಟ್ಟದ ಹಾಕಿ ತಂಡದ ಆಟಗಾರ್ತಿಯಾಗಿದ್ದು, ತಮ್ಮ ನೋವನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಮತ್ತು ಟಿವಿ ಸೆಟ್ ಒದಗಿಸಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com