ಮಮತಾ, ಪವಾರ್ ಬೆನ್ನಲ್ಲೇ ಸಕ್ರಿಯರಾದ ರಾಹುಲ್ ಗಾಂಧಿ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ 2024 ರ ಚುನಾವಣೆಗೆ ಪ್ರತಿಪಕ್ಷಗಳು ಈಗಿನಿಂದಲೇ ತಂತ್ರಗಾರಿಕೆ ಹೆಣೆಯುವಲ್ಲಿ ನಿರತವಾಗಿವೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ 2024 ರ ಚುನಾವಣೆಗೆ ಪ್ರತಿಪಕ್ಷಗಳು ಈಗಿನಿಂದಲೇ ತಂತ್ರಗಾರಿಕೆ ಹೆಣೆಯುವಲ್ಲಿ ನಿರತವಾಗಿವೆ. 

ಇದರ ಭಾಗವಾಗಿಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎನ್ ಸಿಪಿ ನಾಯಕ ಶರದ್ ಪವಾರ್ ಪ್ರತಿಪಕ್ಷಗಳ ಮೈತ್ರಿಗೆ ಪ್ರಯತ್ನಿಸುತ್ತಿದ್ದು,  ದಿಢೀರನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಸಕ್ರಿಯರಾಗಿದ್ದಾರೆ. 

ರಾಹುಲ್ ಗಾಂಧಿ ಆ.03 ರಂದು ಬೇಳಿಗ್ಗೆ ಆಯೋಜಸಿದ್ದ ಉಪಹಾರ ಸಭೆಯನ್ನು ಪ್ರತಿಪಕ್ಷಗಳ ಮೈತ್ರಿ ರಚಿಸುವ ಪ್ರಯತ್ನದ ಭಾಗವೆಂದೇ ವಿಶ್ಲೇಷಿಸಲಾಗುತ್ತಿದೆ. ಲೋಕಸಭೆ-ರಾಜ್ಯಸಭೆಗಳ ನಾಯಕರು, ವಿಪಕ್ಷಗಳ ಸಂಸದರೊಂದಿಗೆ ರಾಹುಲ್ ಗಾಂಧಿ ನಡೆಸಿರುವ ಎರಡನೇ ಸಭೆ ಇದಾಗಿದೆ. 

ರಾಹುಲ್ ಗಾಂಧಿ ಹಿಂದೆಂದೂ ಪ್ರತಿಪಕ್ಷಗಳ ನಾಯಕರೊಂದಿಗೆ ಸಂಸತ್ ನ ಹೊರಗಾಗಲೀ ಒಳಗಾಗಲೀ ಸಭೆ ನಡೆಸಿರಲಿಲ್ಲ. 

ಅಷ್ಟೇ ಅಲ್ಲದೇ ಪ್ರಮುಖ ವಿಚಾರಗಳ ಬಗ್ಗೆ ಸಭೆ ನಡೆಸಿ ಅಭಿಪ್ರಾಯ ಕೇಳುವುದಿಲ್ಲ ಎಂಬ ಬಗ್ಗೆ ಹಿರಿಯ ಕಾಂಗ್ರೆಸ್ಸಿಗರೂ ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡುತ್ತಿದ್ದರು. ಈ ವರೆಗೂ ಆರ್ಟಿಕಲ್ 370 ರದ್ದತಿ, ಕೃಷಿ ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ನಡೆದ ವಿಪಕ್ಷಗಳ ಜಂಟಿ ಸಭೆಗಳಿಗೂ ರಾಹುಲ್ ಗಾಂಧಿ ಭಾಗಿತ್ವ ಅಪರೂಪವಾಗಿರುತ್ತಿತ್ತು. 

ಪ್ರತಿಪಕ್ಷಗಳ ಸಭೆಯಲ್ಲಿ ಗುಲಾಮ್ ನಬಿ ಆಜಾದ್ ಹಾಗೂ ಆನಂದ್ ಶರ್ಮಾ ಕಾಂಗ್ರೆಸ್ ನ್ನು ಪ್ರತಿನಿಧಿಸುತ್ತಿದ್ದರು. ರಾಹುಲ್ ಗಾಂಧಿ ಅವರು ಈಗ ಸಂಸದರೊಂದಿಗೆ ಮಾತುಕತೆ ನಡೆಸುವುದು ಸಮಾನ ಮನಸ್ಕರೊಂದಿಗೆ ಚರ್ಚೆ, ಪ್ರತಿಪಕ್ಷಗಳ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಸಂಸದರೊಬ್ಬರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರಲ್ಲಿನ ಈ ದಿಢೀರ್ ಬದಲಾವಣೆಯನ್ನು ಪಕ್ಷದ ಅನೇಕ ಸದಸ್ಯರು ಸ್ವಾಗತಿಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com