ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ, ವಿಚ್ಛೇಧನಕ್ಕೆ ಕಾರಣವಾಗಹುದು: ಹೈಕೋರ್ಟ್

ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊಚ್ಚಿ: ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅತ್ಯಾಚಾರಕ್ಕೆ ಸಂಬಂಧಪಟ್ಟು ಇರುವ ಕಾನೂನಿನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಒಂದು ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್ ನೀಡಿದ್ದು, ಪತಿಯು ತನ್ನ ಪತ್ನಿಯ ದೇಹವು ಅವನಿಗೆ ಋಣಿಯಾಗಿರಬೇಕು ಎಂಬ ಕಲ್ಪನೆಯಲ್ಲಿದ್ದಾಗ ವೈವಾಹಿಕ ಅತ್ಯಾಚಾರ ಸಂಭವಿಸುತ್ತದೆ ಎಂದು ಹೇಳಿದೆ.

ಈ ಸಂದರ್ಭದಲ್ಲಿ, ಗಂಡನ ಸಂಪತ್ತು ಮತ್ತು ಲೈಂಗಿಕತೆಯ ಬಗೆಗಿನ ಇನ್ನಿಲ್ಲದ ಪ್ರಚೋದನೆಯು ಹೆಂಡತಿಯನ್ನು ವಿಚ್ಛೇದನಕ್ಕೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತದೆ. ಸಂಗಾತಿಯ ಸಂಪತ್ತು ಮತ್ತು ಲೈಂಗಿಕತೆಯ ಬಗೆಗಿನ ಅತೃಪ್ತ ಪ್ರಚೋದನೆಯು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ನ್ಯಾಯಮೂರ್ತಿ ಎ ಮೊಹಮ್ಮದ್ ಮುಸ್ತಾಕ್ ಮತ್ತು ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ವಿಚ್ಛೇದನಕ್ಕಾಗಿ ಪತ್ನಿಯ ಮನವಿಯನ್ನು ಅನುಮತಿಸುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕ್ರೌರ್ಯದ ಆಧಾರದ ಮೇಲೆ ಗಂಡನ ಮನವಿಯನ್ನು ಪೀಠ ವಜಾಗೊಳಿಸಿದೆ.   

ತೊಡೆಗಳ ಮೇಲೆ ಶಿಶ್ನವನ್ನು ಉಜ್ಜುವುದೂ ಅತ್ಯಾಚಾರವೇ
ಇತ್ತೀಚೆಗಷ್ಚೇ ಇದೇ ಕೇರಳ ಹೈಕೋರ್ಟ್ ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಇಂತಹುದೇ ತೀರ್ಪು ನೀಡಿತ್ತು. ಸಂಭೋಗ ನಡೆಸುವುದು ಮಾತ್ರವಲ್ಲ... ತೊಡೆಗಳ ಮೇಲೆ ಶಿಶ್ನವನ್ನು ಉಜ್ಜುವುದೂ ಅತ್ಯಾಚಾರವೇ ಎಂದು ಕೋರ್ಟ್ ಹೇಳಿತ್ತು. 

ನೆರೆ ಮನೆಯ ಬಾಲಕಿಯ ಮೇಲೆ ದುರುದ್ದೇಶಪೂರಿತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ವಿನೋದ್‌ ಚಂದ್ರನ್‌ ಮತ್ತು ಜಿಯಾದ್‌ ರೆಹಮಾನ್‌ ಅವರನ್ನೊಳಗೊಂಡ ಪೀಠ ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಆದರೆ ಪ್ರತಿವಾದಿಗಳು ಸಂತಸ್ತೆಯು ಬಾಲಕಿ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹಾಗಾಗಿ ಈ ಪ್ರಕರಣ ಪೋಕ್ಸೊ ಕಾಯ್ದೆಯಡಿ ಬರುವುದಿಲ್ಲ ಎಂದು ಪೀಠ ತಿಳಿಸಿದೆ. ಅದಾಗ್ಯೂ, ಅರ್ಜಿದಾರ ನಡೆಸಿರುವ ಲೈಂಗಿಕ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376 (1), 375 (ಸಿ) ವ್ಯಾಪ್ತಿಗೆ ಬರುವ ಅಪರಾಧಗಳಾಗಿವೆ ಎಂದು ಪೀಠ ಹೇಳಿದೆ.

ಸಂತ್ರಸ್ತೆಯೊಂದಿಗೆ ಆರೋಪಿ ಸಂಭೋಗ ನಡೆಸಿದರಷ್ಟೇ ಅತ್ಯಾಚಾರ ಎನ್ನಿಸಿಕೊಳ್ಳುವುದಿಲ್ಲ. ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ.  ಮಹಿಳೆಯ ತೊಡೆಗಳನ್ನು ಜೋಡಿಸಿ, ಅದರ ಸಂಧಿಯಲ್ಲಿ ನಡೆಸುವ ಅಸಹಜ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಸಮನಾದದ್ದು ಎಂದೇ ಪರಿಗಣಿಸಬೇಕಾಗುತ್ತದೆ. ಅಲ್ಲದೆ ಇದು ಪರಸ್ಪರ ವಿಚ್ಚೇದನಕ್ಕೆ ಪ್ರಮುಖ ಕಾರಣವಾಗಬಹುದು ಎಂದು ಕೇರಳ ಹೈಕೋರ್ಟ್‌ ಹೇಳಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com